ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪತಿ ಆಸ್ಪತ್ರೆ ಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುವ ವೇಳೆ ಪತ್ನಿ ನೇಣು ಬಿಗಿದು ಆತ್ಮಹತ್ಯೆ

ಪತಿ ಆಸ್ಪತ್ರೆ ಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುವ ವೇಳೆ ಪತ್ನಿ ನೇಣು ಬಿಗಿದು ಆತ್ಮಹತ್ಯೆ

 


ಸಾಗರ: ಆಸ್ಪತ್ರೆಯಲ್ಲಿ ಪತಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವಾಗ ಇಲ್ಲಿ ಮನೆಯಲ್ಲಿ ಆತನ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಗರ ಕೆಳದಿ ರಸ್ತೆಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಪೂರ್ಣಿಮಾ(40)ವರ್ಷ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 


ಘಟನೆಗೆ ಕಾರಣ ಏನೆಂದು ತಿಳಿದುಬಂದಿಲ್ಲ. ಮೃತ ಮಹಿಳೆಯ ಪತಿ ಪಡಿತರ ಅಂಗಡಿ ನಡೆಸುತ್ತಿದ್ದು, ಅನಾರೋಗ್ಯದ ಕಾರಣ ಶಿವಮೊಗ್ಗದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.


ಮಹಿಳೆ ನೇಣಿಗೆ ಶರಣಾಗುವಾಗ ಅವರ ಮನೆಯಲ್ಲಿ ದಂಪತಿಗಳ ವಿಶಿಷ್ಟ ಚೇತನ ಮಗನೋರ್ವ ಇದ್ದ ಎನ್ನಲಾಗಿದೆ.  ಈ ಬಗ್ಗೆ ನಗರ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

0 Comments

Post a Comment

Post a Comment (0)

Previous Post Next Post