ಬಂಟ್ವಾಳ: ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೊಮ್ಮಗಳು ಬಂಟ್ವಾಳ ವೀರಕಂಬ ಮೂಲದ ಯುವಕನನ್ನು ವರಿಸಿದ್ದು ಅ.25 ರಂದು ಬೆಂಗಳೂರು ಅರಮನೆ ಸಭಾಂಗಣದಲ್ಲಿ ಅದ್ದೂರಿ ವಿವಾಹ ಕಾರ್ಯಕ್ರಮ ನಡೆಯಿತು.
ವೀರಕಂಬ ಗ್ರಾಮದ ಗಿಳ್ಕಿಂಜದ ಎ.ಟಿ ಹರಿಶಂಕರ - ವಿಜಯಲಕ್ಷ್ಮಿ ಅವರ ಪುತ್ರ ಪಾಣಿನಿ ಭಟ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಮೊಮ್ಮಗಳು ಜಯಶ್ರೀ ಹಾಗೂ ರಾಧಾಕೃಷ್ಣ ಅವರ ಪುತ್ರಿ ಪ್ರಾರ್ಥನ ಅವರನ್ನು ವರಿಸಿದ್ದಾರೆ.
ಪಾಣಿನಿ ಭಟ್ ಮತ್ತು ಪ್ರಾರ್ಥನಾ ಇಬ್ಬರೂ ಕೂಡಾ ನ್ಯಾಯವಾದಿಗಳಾಗಿದ್ದು, ಸಂಸ್ಥೆಯೊಂದರಲ್ಲಿ ಜೊತೆಯಲ್ಲಿ ಕೆಲಸದಲ್ಲಿದ್ದು, ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯ ವಿಷಯವನ್ನು ತಿಳಿದ ಎರಡೂ ಕುಟುಂಬಗಳು, ಮದುವೆಗೆ ಒಪ್ಪಿಸಿದ್ದಾರೆ.
ದಲಿತ ವರ್ಗದ ಹುಡುಗಿಯನ್ನು ಹವ್ಯಕ ಬ್ರಾಹ್ಮಣ ಕುಟುಂಬದ ಸೊಸೆಯಾಗಿ ಸ್ವೀಕರಿಸಿದ್ದು ಎರಡೂ ಕುಟುಂಬಗಳ ಸಮ್ಮತಿಯಿಂದ ಅದ್ಧೂರಿಯಿಂದ ಮದುವೆ ಕಾರ್ಯ ಜರುಗಿದೆ. ಸಮಾರಂಭದಲ್ಲಿ ರಾಷ್ಟ್ರ ರಾಜ್ಯದ ಗಣ್ಯರು ಪಾಲ್ಗೊಂಡಿದ್ದರು.
Post a Comment