ಕರ್ನೂಲ್: ತೆಲಂಗಾಣದಲ್ಲಿ 50 ವರ್ಷದ ಮಹಿಳೆಯೊಬ್ಬರು ಬೇಯಿಸಿದ ಮೊಟ್ಟೆ ತಿನ್ನಲು ಹೋಗಿ ಗಂಟಲಲ್ಲಿ ಸಿಲುಕಿ ಮೃತಪಟ್ಟ ಘಟನೆಯೊಂದು ನಡೆಯಿತು.
ನೀಲಮ್ಮ ಮೃತ ದುರ್ದೈವಿ. ಕರ್ನೂಲ್ ಜಿಲ್ಲೆಯ ನೇರಳಪಲ್ಲಿ ಗ್ರಾಮದಲ್ಲಿ ಬುಧವಾರ ರಾತ್ರಿ ಈ ದುರಂತ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬುಧವಾರ ರಾತ್ರಿ ಊಟದ ಜೊತೆ ಮೊಟ್ಟೆ ತಿನ್ನಲೆಂದು ನೀಲಮ್ಮ ಮೊಟ್ಟೆಗಳನ್ನು ಬೇಯಿಸಿದ್ದರು. ಕುಟುಂಬಸ್ಥರೊಂದಿಗೆ ಊಟ ಮಾಡುವಾಗ ಎಲ್ಲರಿಗೂ ಮೊಟ್ಟೆಯನ್ನು ಬಡಿಸಿದ್ದರು.
ತಾನೂ ಊಟ ಮಾಡುತ್ತಾ ಕುಳಿತಿದ್ದ ನೀಲಮ್ಮ, ಒಂದು ಮೊಟ್ಟೆಯನ್ನು ಕತ್ತರಿಸದೇ ಇಡೀ ಬಾಯಲ್ಲಿ ಹಾಕಿಕೊಂಡು ನುಂಗಿದ್ದಾರೆ. ಮೊಟ್ಟೆ ಗಂಟಲಲ್ಲಿ ಸಿಲುಕಿ, ಒಳಗೂ ಹೋಗದೆ, ಹೊರಗೂ ಬಾರದೆ ಅಲ್ಲೇ ಇದ್ದು, ಬಾಯಿಂದ ಹೊರಗೆ ಉಗಿಯಲು ನೀಲಮ್ಮ ಎಷ್ಟೇ ಪ್ರಯತ್ನಿಸಿದರೂ ಫಲಿಸಲಿಲ್ಲ.
ಉಸಿರಾಟಕ್ಕೆ ಸಮಸ್ಯೆ ಉಂಟಾಗಿ, ಕ್ಷಣಾರ್ಧದಲ್ಲೇ ಪ್ರಜ್ಞೆ ತಪ್ಪಿ ಬಿದ್ದರು. ಕುಟುಂಬಸ್ಥರು ನೀಲಮ್ಮರ ಗಂಟಲಿಂದ ಮೊಟ್ಟೆಯನ್ನು ಹೊರ ತೆಗೆಯಲು ಪ್ರಯತ್ನಪಟ್ಟರು ಪ್ರಯೋಜನವಾಗಲೇ ಇಲ್ಲ. ಅಷ್ಟು ಹೊತ್ತಿಗಾಗಲೇ ನೀಲಮ್ಮ ಸಾವನ್ನಪ್ಪಿದರು.
إرسال تعليق