ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಆಂಗ್ಲ ವಿಭಾಗ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ‘ದೃಷ್ಟಿ' ಯೂಟ್ಯೂಬ್ ಚಾನೆಲ್ ಅನಾವರಣ ಹಾಗೂ ಇಂಗ್ಲೀಷ್ ವಿಭಾಗ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಜಂಟಿಯಾಗಿ ‘ಯುರೋಪಿಯನ್ ಲಿಟೆರರಿ ಥೀಯರೀಸ್’ ಎಂಬ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರದ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಗುರುವಾರ ನಡೆಯಿತು.
‘ದೃಷ್ಟಿ' ಪ್ರಥಮ ಸಂಚಿಕೆಯ ವಿಡಿಯೋ ಅನಾವರಣಗೊಳಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ವಿದ್ಯಾರ್ಥಿಗಳ ಪರಿಶ್ರಮಕ್ಕೆ ಶುಭಕೋರಿ ವಿದ್ಯಾರ್ಥಿಗಳ ಇಂತಹ ಪ್ರಯತ್ನಗಳಿಗೆ ಕಾಲೇಜಿನ ಬೆಂಬಲ ಸದಾ ಬೆನ್ನಹಿಂದಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ.ಎಸ್. ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಎಚ್, ಉಪನ್ಯಾಸಕಿಯರಾದ ರೇಖಾ ನಾಯರ್, ಸರಸ್ವತಿ ಸಿ. ಕೆ., ಅಂಬಿಕಾ ಎನ್. ಆರ್. ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕಾರ್ತಿಕ್ ಪೈ ಸ್ವಾಗತಿಸಿ ಚೈತ್ರಾ ಭಟ್ ವಂದಿಸಿದರು. ಪೌರ್ಣಿಕಾ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق