ಬೆಂಗಳೂರು: ಬುಲೆಟ್ಗೆ ಟಿಪ್ಪರ್ ಡಿಕ್ಕಿಯಾಗಿ ತಾಯಿ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು ಮಾರತ್ ಹಳ್ಳಿ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ. ಶ್ರೀದೇವಿ (21 ವರ್ಷ) ಹಾಗೂ ದೀಕ್ಷಿತ (1 ವರ್ಷ) ಮೃತ ದುರ್ದೈವಿಗಳು.
ಮೃತ ಶ್ರೀದೇವಿ ಪತಿ ಶಿವಕುಮಾರ್ ಜೊತೆಗೆ ಬುಲೆಟ್ನಲ್ಲಿ ನಗರದ ಕೆಆರ್ ಪುರಂನಿಂದ ತಮಿಳುನಾಡಿನ ಧರ್ಮಪುರಿಗೆ ತೆರಳುತ್ತಿದ್ದರು. ಮಾರತ್ ಹಳ್ಳಿ ಹೊರವರ್ತುಲ ಬಳಿ ಬುಲೆಟ್ಗೆ ಟಿಪ್ಪರ್ ಡಿಕ್ಕಿಯಾಗಿದ್ದು, ಬುಲೆಟ್ನ ಹಿಂಬದಿಯಲ್ಲಿದ್ದ ತಾಯಿ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ಹೆಚ್ಎಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق