ವೃತ್ತಿಯಲ್ಲಿ ಕೃಷಿಕರು ಹಾಗೂ ಹೋಟೆಲ್ ಉದ್ಯಮಿ ನೆಕ್ಕಿಲ ಸುಬ್ರಾಯ ತುಂಗರು.
ನೆಕ್ಕಿಲ ಸುಬ್ರಾಯ ತುಂಗ ಅವರು 1967ರಲ್ಲಿ ದೇರೆಬೈಲ್ ನಲ್ಲಿ ಬಂದವರು ಅವರು ನೆಕ್ಕಿಲ ಗುಡ್ಡ ರಸ್ತೆಯನ್ನು ತಾವೇ ಸ್ವತಃ ಎಲ್ಲರ ಹತ್ತಿರ ಕೇಳಿ ರಸ್ತೆಯನ್ನು ತಮ್ಮ ಸ್ವಂತ ನಡವಳಿಕೆಯಿಂದ ಮಾಡಿಸಿ ಎಲ್ಲರ ಹತ್ತಿರ ಜಾಗವನ್ನು ಮಾತಾಡಿಸಿ ಸರಿಪಡಿಸಿದವರು ಅವರು ಇಲ್ಲಿ ಜಾಗದಲ್ಲಿ ಬೇಸಾಯವನ್ನು ಮಾಡುತ್ತಿದ್ದರು. ಇದೇ ದೇರೆಬೈಲ್ ನಗರದಲ್ಲಿ ಒಂದು ಅಕ್ಕಿ ಗಿರಣಿಯನ್ನು ಆರಂಭಿಸಿದ್ದರು. ಇಡೀ ದೇರೆಬೈಲು ಪರಿಸರದಲ್ಲಿ ಗದ್ದೆಗಳು ಹಾಗೂ ಬತ್ತ ಬೇಸಾಯವನ್ನು ಮಾಡುತ್ತಿದ್ದು ಜನರು ಗಿರಣಿಗೆ ತರುತ್ತಿದ್ದರು. ಆ ಕಾಲದಲ್ಲಿ ಯಾರಿಗಾದರೂ ಊಟಕ್ಕೆ ಸ್ವಲ್ಪ ಅಕ್ಕಿ ಹಾಗೂ ಇನ್ನಿತರ ಸಹಾಯವನ್ನು ನೀಡುತ್ತಿದ್ದರು. ಆ ಕಾಲದಲ್ಲಿ ಅವರಿಗೆ ಒಂದು ಅಂಬಾಸಿಡರ್ ಕಾರು ಇತ್ತು. ರಾತ್ರಿ ಹಗಲು ಎಷ್ಟೊತ್ತಾದರೂ ಯಾರಾದರೂ ಬಂದರೆ ಆಸ್ಪತ್ರೆಗೆ ಹೋಗಲು ಜನರಿಗೆ ಅಸೌಖ್ಯ ಇದ್ದರೆ ಇವರ ಬಳಿ ಬರುತ್ತಿದ್ದರು. ಆಗ ಅವರು ತಾವೇ ತಮ್ಮ ಸ್ವತಃ ಬಂದು ತಮ್ಮ ಕಾರಿನಲ್ಲಿ ಅಸೌಖ್ಯದಿಂದ ಇದ್ದವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ತಮ್ಮ ಕೈಯಲ್ಲಾದ ಸಹಾಯ ಮಾಡುತ್ತಿದ್ದರು. ಆ ಕಾಲದಲ್ಲಿ ಅಕ್ಕಿ ಮಿಲ್ ಕಾರು ಭಟ್ರು ಎಂದು ಹೆಸರುವಾಸಿಯಾಗಿದ್ದರು.
ತದನಂತರ ಪಂಚಾಯಿತಿಯಿಂದ ನಗರಪಾಲಿಕೆಗೆ ವರ್ಗಾವಣೆಯಾದ ನಂತರ ಇವರ ಜಮೀನು ಮಾಲೆಮಾರ್ ಮುಖ್ಯ ರಸ್ತೆಗೂ ಹಾಗೂ ಒಳರಸ್ತೆ ರಸ್ತೆಗೂ ಉದಾರ ಮನಸ್ಸಿನಿಂದ ಜಮೀನನ್ನು ಕೊಟ್ಟಿರುತ್ತಾರೆ. ಆದುದರಿಂದ ಈ ಒಳ ಅಡ್ಡರಸ್ತೆಗೆ ಅವರ ನಾಮಫಲಕವನ್ನು ಅಳವಡಿಸಬೇಕೆಂದು ಕೋರಿಕೆ.
-ಸೂರ್ಯನಾರಾಯಣ ತುಂಗ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment