ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೆ.ಎಲ್‌ ಕುಂಡಂತಾಯರ 'ನವ ನವ ದುರ್ಗಾ' ಲೇಖನ ಸಂಗ್ರಹ ಬಿಡುಗಡೆ

ಕೆ.ಎಲ್‌ ಕುಂಡಂತಾಯರ 'ನವ ನವ ದುರ್ಗಾ' ಲೇಖನ ಸಂಗ್ರಹ ಬಿಡುಗಡೆ



ಉಡುಪಿ: ಒಂಬತ್ತು ನವರಾತ್ರಿ ಕುರಿತ ಲೇಖನ ಒಂಬತ್ತು ದುರ್ಗಾ ಕ್ಷೇತ್ರ ಪರಿಚಯ "ನವ ನವ ದುರ್ಗಾ" ಕೆ.ಎಲ್. ಕುಂಡಂತಾಯರ ಲೇಖನಗಳ ಸಂಗ್ರಹ'- ಈ ಪುಸ್ತಕವು ಶಾರದಾಪೂಜಾರಂಭ- ವ್ಯಾಸ ಪ್ರತಿಷ್ಠೆಯ ದಿನ ಕಟೀಲು ಶ್ರೀ ದುರ್ಗಾಪರಮೇಶ್ವರೀಯ ಸನ್ನಿಧಿಯಲ್ಲಿ ಬಿಡುಗಡೆಗೊಂಡಿತು.


ಈ ಕೃತಿಯಲ್ಲಿ ಮಾತೃ- ಪ್ರಕೃತಿ- ಶಕ್ತಿ ಉಪಾಸನಾ ಪರ್ವ, ಸೃಷ್ಟಿ- ಸ್ಥಿತಿ- ಲಯ ರೂಪಿ ಶಕ್ತಿ ಆರಾಧನೆ, ಶಕ್ತಿ ಉಪಾಸನೆಯ ಹಿನ್ನೆಲೆ, ಶರನ್ನವರಾತ್ರಿ ರಮೋತ್ಸವ, ಇತ್ಯಾದಿ ವಿವರಗಳಿವೆ.


ಎಲ್ಲೂರಿನ ಅಮ್ನೂರು, ಕುಂಜೂರಿನ ದುರ್ಗಾ, ನಿರ್ಜರಾರಣ್ಯದ ಕಟೀಲಪ್ಪೆ, ನಂದ್ಯೂರಮ್ಮ, ಬಪ್ಪನಾಡಮ್ಮ, ಬಯಲೂರಮ್ಮ, ಪುತ್ತೂರಪ್ಪೆ ಭಗವತಿ, ಶಂಭುಕಲ್ಲಿನ ಮೃಣ್ಮಯ ದುರ್ಗೆ, ಕಾಪುದಪ್ಪೆ ಮಾರಿಯಮ್ಮಯರ ಬಗ್ಗೆ ಸವಿವರ ಮಾಹಿತಿ ನೀಡಲಾಗಿದೆ.


0 Comments

Post a Comment

Post a Comment (0)

Previous Post Next Post