ಬೆಳ್ತಂಗಡಿ: ಸಹಕಾರ ಭಾರತಿ ಬೆಳ್ತಂಗಡಿ ತಾಲೂಕು ನೂತನ ಅಧ್ಯಕ್ಷರಾಗಿ ರಾಜೇಶ್ ಪೆಂರ್ಬುಡ ಆಯ್ಕೆಯಾಗಿದ್ದಾರೆ. ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿಯಲ್ಲಿ ನಡೆದ ಸಹಕಾರ ಭಾರತಿಯ ಸಭೆಯಲ್ಲಿ ಜಿಲ್ಲಾಧ್ಯಕ್ಷರು ತಾಲೂಕಿನ ನೂತನ ಸಮಿತಿಯನ್ನು ಘೋಷಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಹಸೇವಾ ಪ್ರಮುಖ್ ಸುಭಾಷ್ ಕಳೆಂಜ, ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಕೊಂಪದವು, ಸಹಕಾರ ಭಾರತಿ ತಾಲೂಕು ಅಧ್ಯಕ್ಷರಾಗಿದ್ದ ಸುಂದರ ಹೆಗ್ಡೆ ವೇಣೂರು ಉಪಸ್ಥಿತರಿದ್ದರು.
ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಸಮಿತಿಯನ್ನು ಘೋಷಣೆ ಮಾಡಲಾಯಿತು.
ಅಧ್ಯಕ್ಷರಾಗಿ ರಾಜೇಶ್ ಪೆಂರ್ಬುಡ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಶಿರ್ಲಾಲು, ಉಪಾಧ್ಯಕ್ಷರಾಗಿ ವಿಷ್ಣು ಮರಾಠೆ ಕಳೆಂಜ, ರವೀಂದ್ರನಾಥ್ ಪೆರ್ಮುದೆ ಕೊಯ್ಯೂರು, ರಾಜು ದೇವಾಡಿಗ ಅರಸಿನಮಕ್ಕಿ, ಕಾರ್ಯದರ್ಶಿಗಳಾಗಿ ವೆಂಕಪಯ್ಯ ಲಾಯಿಲಾ, ರಾಮದಾಸ್ ನಾಯಕ್ ವೇಣೂರು, ಲೋಹಿತ್ ಶೆಟ್ಟಿ ಕುಪ್ಪೆಟ್ಟಿ, ಸದಸ್ಯರಾಗಿ ಸೋಮನಾಥ ಬಂಗೇರ ವರ್ಪಾಳೆ, ಸುಧಾಕರ ನೂಯಿ ಬಡಕೋಡಿ, ಶ್ರೀಮತಿ ಶೀಲಾವತಿ ಮೊಗ್ರು, ಖಾಯಂ ಆಹ್ವಾನಿತರಾಗಿ ಪದ್ಮನಾಭ ಅರ್ಕಜೆ, ಸುಂದರ ಹೆಗ್ಡೆ ವೇಣೂರು, ವಸಂತ ಮಜಲು, ಕುಶಾಲಪ್ಪ ಗೌಡ ಪೂವಾಜೆ, ರಾಘವೇಂದ್ರ ನಾಯಕ್ ಶಿಬಾಜೆ, ರಮೇಶ್ ಭಟ್ ಕಳೆಂಜ, ಹರಿದಾಸ್ ಗಾಂಭೀರ್ ಧರ್ಮಸ್ಥಳ, ಜನಾರ್ದನ ನೂಜಿ ಮುಂಡಾಜೆ, ಹರೀಶ್ ಮೋರ್ತಾಜೆ ಬಂಗಾಡಿ, ಶಿವ ಭಟ್ ಅಳದಂಗಡಿ, ಸುಧಾಕರ ಭಂಡಾರಿ ನಾರಾವಿ, ಪದ್ಮನಾಭ ಸಾಲ್ಯಾನ್ ಮಚ್ಚಿನ, ಪ್ರಸನ್ನ ಗೌಡ ಬಾರ್ಯ, ರಕ್ಷಿತ್ ಶೆಟ್ಟಿ ಪಣಿಕ್ಕರ, ನವೀನ್ ಸಾಮಾನಿ ಶಿರ್ಲಾಲು ಆಯ್ಕೆ ಮಾಡಲಾಯಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق