ಬಂಟ್ವಾಳ ತಾಲೂಕಿನ ಮಂಡಾಡಿ ಎಂಬಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ದುರ್ಗಾಂಬಾ ಶಾಖೆ ವತಿಯಿಂದ ನಿರ್ಮಿಸಲಾದ ಕಟ್ಟೆ ಮತ್ತು ಭಗವಾದ್ವಜವನ್ನು ಕಿಡಿಗೇಡಿಗಳು ರಾತ್ರಿ ನಾಶ ಮಾಡಿರುತ್ತಾರೆ.
ಈ ಹೇಯ ಕೃತ್ಯವನ್ನು ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ತೀವ್ರವಾಗಿ ಖಂಡಿಸಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಇಲಾಖೆ ರಾಜಕೀಯ ಒತ್ತಡದಕ್ಕೆ ಮಣಿಯದೆ ಈ ಸಂಬಂಧ ಹಿಂದೂ ವಿರೋಧಿ ಆರೋಪಿಗಳನ್ನು ಪತ್ತೆ ಹಚ್ಚಿ ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಈ ರೀತಿಯಲ್ಲಿ ಘಟನೆಗಳು ಮುಂದುವರಿದರೆ ಪರಿಸ್ಥಿತಿ ಮಿತಿ ಮೀರಿ ಹೋಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತಪ್ಪಿತಸ್ಥರನ್ನು ಶೀಘ್ರವಾಗಿ ಬಂಧಿಸುವಂತೆ ಪ್ರಭಾಕರ ಪ್ರಭು ರಾಜ್ಯ ಸರಕಾರದ ಗೃಹ ಸಚಿವರನ್ನು ಮನವಿ ಮೂಲಕ ವಿನಂತಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق