ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೊರೊನಾ ಮೃತರಿಗೆ ಸಚಿವ ಅಶೋಕ್ ಪಿಂಡ ಪ್ರದಾನ ಕಾರ್ಯ ಅತ್ಯಂತ ಶ್ಲಾಘನೀಯ: ಪೇಜಾವರ ಶ್ರೀ

ಕೊರೊನಾ ಮೃತರಿಗೆ ಸಚಿವ ಅಶೋಕ್ ಪಿಂಡ ಪ್ರದಾನ ಕಾರ್ಯ ಅತ್ಯಂತ ಶ್ಲಾಘನೀಯ: ಪೇಜಾವರ ಶ್ರೀ



ಉಡುಪಿ: ಕರ್ನಾಟಕದಲ್ಲಿ ಕೊರೊನಾ ಮಹಾವ್ಯಾಧಿಯಿಂದ ಮೃತರಾದ 1130 ಮಂದಿಗೆ ಸದ್ಗತಿ ದೊರಕಲೆಂಬ ಆಶಯದೊಂದಿಗೆ ರಾಜ್ಯ ಕಂದಾಯ ಮಂತ್ರಿ ಆರ್ ಅಶೋಕ್ ಪಿಂಡ ಪ್ರದಾನ ಪೂರ್ವಕ ಉತ್ತರಕ್ರಿಯಾ ವಿಧಿಯನ್ನು ನಡೆಸಿರುವುದಕ್ಕೆ ಶ್ರೀ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದಾರೆ.


ಇದೊಂದು ಸ್ತುತ್ಯರ್ಹವಾದ ಕೆಲಸ. ನಮ್ಮ ಸನಾತನ ನಂಬಿಕೆಯನುಸಾರ ಮೃತರಾದವರಿಗೆ ಔರ್ಧ್ವದೈಹಿಕ ಕ್ರಿಯೆಗಳನ್ನು ನಡೆಸಿ ಸದ್ಗತಿಗಾಗಿ ಪ್ರಾರ್ಥಿಸುವುದು ಅತ್ಯಂತ ಅವಶ್ಯ ಕರ್ತವ್ಯ. ಮಹಾವ್ಯಾಧಿಯಿಂದ ಮೃತರಾದ ಇಷ್ಟು ಮಂದಿಗೆ ಆ ವಿಧಿಗಳನ್ನು ನಡೆಸಲು ರೋಗದ ಭಯದಿಂದಲೋ ಏನೋ ಈ ಕ್ರಿಯೆಗಳನ್ನು ನಡೆಸಲು ಹಿಂದೇಟು ಹಾಕಿದಾಗ ಪ್ರಜಾತಾಂತ್ರಿಕ ಸರ್ಕಾರದ ಪರವಾಗಿ ಆ ಜವಾಬ್ದಾರಿ ಹೊತ್ತು ಸಚಿವ ಅಶೋಕ್ ಈ ಕೆಲಸ ಮಾಡಿರುವುದನ್ನು ಕಂಡು ನಮಗೆ ಅತೀವ ಸಂತಸವಾಗಿದೆ ಎಂದು ಶ್ರೀಗಳು ಬಣ್ಣಿಸಿದ್ದಾರೆ.


ಈ ಹಿಂದೆ ಕೋವಿಡ್ ನಿಂದ ಮೃತಪಟ್ಟ ನೂರಾರು ಜನರ ಅಸ್ಥಿ ವಿಸರ್ಜನೆಯ ಕಾರ್ಯವನ್ನೂ ಅಶೋಕ್ ಅವರು ವಿಧಿವತ್ತಾಗಿ ನಡೆಸಿರುವುದನ್ನೂ ಶ್ರೀಗಳು ಅಭಿನಂದಿಸಿ ಸ್ಮರಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم