ಮಂಗಳೂರು: ಕನ್ನಡ ನಾಡು ನುಡಿ, ಜಲ ಸಂರಕ್ಷಣೆ, ಸ್ಥಳೀಯರಿಗೆ ಉದ್ಯೋಗ ಮತ್ತಿತರ ನ್ಯಾಯಯುತ ಬೇಡಿಕೆಗೆ ಹೋರಾಟ ನಡೆಸುತ್ತಾ ಬರುತ್ತಿರುವ ಕನ್ನಡ ಸೇನೆ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ಕಚೇರಿ" ಉದ್ಘಾಟನೆ ಸಮಾರಂಭ ಅ.9ರಂದು ಬೆಳಗ್ಗೆ 11.00 ಗಂಟೆಗೆ ಕೂಳೂರಿನ ವ್ಯವಸಾಯ ಸೇವಾ ಸಹಕಾರಿ ಸಭಾಂಗಣದಲ್ಲಿ ಜರಗಲಿದೆ ಎಂದು ಕನ್ನಡ ಸೇನೆ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಉದ್ಘಾಟನೆಯನ್ನು ಡಾ. ಮೋಹನ್ ಆಳ್ವ (ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಸಂಸ್ಥೆ (ರಿ) ಮೂಡಬಿದ್ರೆ) ಅವರು ಮಾಡಲಿದ್ದಾರೆ ಮತ್ತು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರದೀಪ್ ಕುಮಾರ್ ಕಲ್ಕೂರ (ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷನ್, ದಕ್ಷಿಣ ಕನ್ನಡ) ಮತ್ತು ಶ್ರೀ ಶ್ರೀನಿವಾಸ್ ನಾಯಕ್ (ಅಧ್ಯಕ್ಷರು, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ) ಹಾಗೂ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಭಾಗವಹಿಸಲಿದ್ದಾರೆ.
ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಯನ್ನು ಬಯಸುವ ಮತ್ತು ಹಿತ ಕಾಯುವ ಮಹತ್ತರ ಉದ್ದೇಶವಿಟ್ಟುಕೊಂಡು ಸ್ಮಾಪನೆಯಾದ ಕನ್ನಡ ಸೇನೆ ಕರ್ನಾಟಕಕ್ಕೆ 35 ವರ್ಷಗಳು ಸಂದಿವೆ. 2013ರಲ್ಲಿ ಪುತ್ತೂರಿನಲ್ಲಿ ಕನ್ನಡ ಸೇನೆ ಅಸ್ಥಿತ್ವಕ್ಕೆ ಬಂದು ಸರಕಾರಿ ಮೆಡಿಕಲ್ ಕಾಲೇಜು ತರುವಲ್ಲಿ ನಿರ್ಣಾಯಕ ಹೋರಾಟ ಮಾಡಿದೆ. ಹಲವಾರು ಹೋರಾಟ ಮಾಡಿಕೊಂಡು ಜನತೆಗೆ ನ್ಯಾಯಯುತ ಹಕ್ಕು ಒದಗಿಸುವಲ್ಲಿ ಸಫಲವಾಗಿದೆ.
ಮುಂದಿನ ನಮ್ಮ ಹೋರಾಟ ಸರೋಜಿನಿ ಮಹಿಷಿ ವರದಿ ಜಾರಿ, ಭೂಮಿ, ನೀರು ಕೊಟ್ಟು ಪ್ರೋತ್ಸಾಹಿಸಿದ ಸ್ಥಳೀಯರಿಗೆ ಉದ್ಯೋಗ ಸಿಗಬೇಕೆಂಬುದು ನಮ್ಮ ನಿಲುವು. ಇಲ್ಲಿನ ಎಂಆರ್‌ಪಿಎಲ್, ಎನ್ಎಂಪಿಟಿ, ಬಿಎಎಸ್ ಎಫ್, ಎಸ್ಇಝಡ್ ಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗಕ್ಕೆ ಆಗ್ರಹ ಮಾಡಲಿದ್ದೇವೆ. ನೊಂದವರಿಗೆ ಸಹಾಯಹಸ್ತ ಚಾಚಲಿದ್ದೇವೆ.
ಗಡಿ ನಾಡಿನಲ್ಲಿ ಕನ್ನಡಕ್ಕೆ ಧಕ್ಕೆ ಆಗದಂತೆ ನಮ್ಮ ಕಾರ್ಯಕ್ರಮ, ಚಳುವಳಿ ಹೋರಾಟ ನಿರಂತರವಾಗಿರುತ್ತದೆ. ರಾಷ್ಟ್ರೀಯ ಬ್ಯಾಂಕ್, ರೈಲ್ವೆ ನಿಲ್ದಾಣ ಸೇರಿದಂತೆ ಸ್ಥಳೀಯ ಭಾಷಾ ಸಿಬಂದಿಗೆ ಆದ್ಯತೆ ನೀಡುವ ಬಗ್ಗೆ ಹೋರಾಟ ಆದ್ಯತೆ ನೀಡಲಿದ್ದೇವೆ.
ಬೆಳ್ತಂಗಡಿ ತಾಲೂಕು ಹಾಗೂ ಮಂಗಳೂರು, ಮಂಗಳೂರು ಉತ್ತರ ಘಟಕಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕನ್ನಡಸೇನೆ ಕಾರ್ಯ ನಿರ್ವಹಿಸಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಅಧ್ಯಕ್ಷ ಚಂದ್ರ ಶೇಖರ್ ಎ. ಮಾತನಾಡಿ, ಕನ್ನಡ ಸೇನೆ ಈವರೆಗೆ ನಡೆಸುತ್ತಾ ಬಂದ ಹೋರಾಟದ ರೂಪುರೇಷೆ ವಿವರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಬೆಳ್ತಂಗಡಿ ಘಟಕ ಅಧ್ಯಕ್ಷ ಗುರುಪ್ರಸಾದ್, ಸುರತ್ಕಲ್ ಘಟಕದ ಸಂಜೀವ ಸುವರ್ಣ, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಂಬ್ಳೆ, ಕಾನೂನು ಸಲಹೆಗಾರ ನ್ಯಾಯವಾದಿ ಶ್ರೀಧರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುಖೇಶ್ ಮಾಲಾಡಿ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق