ಉಜಿರೆ: ಕರ್ನಾಟಕ ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಸೇವಾ ಯೋಜನೆ 2017-18, 2018-19 ಹಾಗೂ 2019-20 ಈ ಸಾಲಿನ ರಾಜ್ಯ ಪ್ರಶಸ್ತಿಗಳನ್ನು ಇತ್ತೀಚೆಗೆ ಪ್ರದಾನ ಮಾಡಲಾಯಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು 2018-19 ಹಾಗೂ 2019-20 ಸಾಲಿನ ಅತ್ಯುತ್ತಮ ಘಟಕ ಪ್ರಶಸ್ತಿಗಳನ್ನು ಪಡೆದಿರುತ್ತವೆ.
ಈ ಘಟಕಗಳ ಯೋಜನಾಧಿಕಾರಿಗಳಾದ ಸಸ್ಯಶಾಸ್ತ್ರ ಪ್ರಾಧ್ಯಾಪಕ ಶ್ರೀ ಗಣೇಶ ಶೆಂಡ್ಯೆ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಶ್ರೀಮತಿ ಆಶಾಕಿರಣ ಇವರಿಗೆ ಉತ್ತಮ ಯೋಜನಾಧಿಕಾರಿ ರಾಜ್ಯಪ್ರಶಸ್ತಿ ಬಂದಿರುತ್ತದೆ
2017-18 ಹಾಗೂ 2019- 20 ಸಾಲಿನಲ್ಲಿ ಸ್ವಯಂಸೇವಕರಾದ ಶ್ರೀ ಧನುಷ್ ಕೆ.ಪಿ ಹಾಗೂ ಶ್ರೀ ಸತ್ಯಪ್ರಸಾದ್ ಇವರಿಗೆ ಉತ್ತಮ ಸ್ವಯಂ ಸೇವಕ ರಾಜ್ಯ ಪ್ರಶಸ್ತಿ ಬಂದಿರುತ್ತದೆ.
ಕಳೆದ ನಾಲ್ಕು ವರ್ಷಗಳಲ್ಲಿ ಕಾಲೇಜಿನ ಎನ್‌ಎಸ್‌ಎಸ್ ತಂಡ ಎರಡು ಬಾರಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ, ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆದ 12 ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳಲ್ಲಿ ಭಾಗವಹಿಸಿದುದಲ್ಲದೆ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ವೃಕ್ಷಾರೋಪಣ ಅಭಿಯಾನ, ಅನೀಮಿಯಾ ಮುಕ್ತ ಅಭಿಯಾನ, ಜಲ ಸಂರಕ್ಷಣಾ ಅಭಿಯಾನ ಮುಂತಾದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿವೆ. ಈ ಎಲ್ಲಾ ಸಾಧನೆಗಳನ್ನು ಮಾನದಂಡವಾಗಿಟ್ಟುಕೊಂಡು ಕಾಲೇಜಿಗೆ ಈ ಬಾರಿ ಒಟ್ಟು ಆರು ರಾಜ್ಯ ಪ್ರಶಸ್ತಿಗಳು ಲಭಿಸಿವೆ.
ಬೆಂಗಳೂರಿನ ಕ್ರೀಡಾ ಇಲಾಖೆಯ ಯವನಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್ಚಂದ್ರ ಎಸ್, ಯೋಜನಾಧಿಕಾರಿಗಳಾದ ಶ್ರೀ ಗಣೇಶ ಶೆಂಡ್ಯೆ ಹಾಗೂ ಶ್ರೀಮತಿ ಆಶಾಕಿರಣ, ಸ್ವಯಂಸೇವಕರಾದ ಶ್ರೀ ಧನುಷ್ ಕೆಪಿ ಹಾಗೂ ಶ್ರೀ ಸತ್ಯಪ್ರಸಾದ್ ಅವರು ಕ್ರೀಡಾ ಮಂತ್ರಿಗಳಾದ ಡಾ. ಕೆ.ಸಿ. ನಾರಾಯಣ ಗೌಡ ಇವರ ಅಧ್ಯಕ್ಷತೆಯಲ್ಲಿ ಇತರ ಗಣ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق