ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಲ್ಲಡ್ಕ ಕೆ.ಟಿ ಗೆ ಪ್ರಸಿದ್ಧಿ ಪಡೆದ ಲಕ್ಷ್ಮೀ ನಿವಾಸ ಹೋಟೆಲ್ ತೆರವು

ಕಲ್ಲಡ್ಕ ಕೆ.ಟಿ ಗೆ ಪ್ರಸಿದ್ಧಿ ಪಡೆದ ಲಕ್ಷ್ಮೀ ನಿವಾಸ ಹೋಟೆಲ್ ತೆರವು



ಕಲ್ಲಡ್ಕ; ಬೆಂಗಳೂರು ರಾಷ್ಟ್ರೀಯ 75ರ ಬಿಸಿರೋಡ್-ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಮತ್ತೆ ಆರಂಭಗೊಂಡಿದ್ದು, ಕೆಲ ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಹೆದ್ದಾರಿ ಭೂ ಸ್ವಾಧೀನ ಕಾಮಗಾರಿ ಮತ್ತೆ ಚಾಲನೆಗೊಂಡಿದೆ. ಬಿ. ಸಿ. ರೋಡ್‌ನಿಂದ ಅಡ್ಡಹೊಳೆಯವರೆಗೆ ರಸ್ತೆ ಬದಿಯಲ್ಲಿದ್ದ ಎಲ್ಲಾ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.


ಈ ರಸ್ತೆ ಕಾಮಗಾರಿಗಾಗಿ ರಾಷ್ಟ್ರ ಮಟ್ಟದಲ್ಲಿ ಸ್ಪೆಷಲ್ ಚಹಾದ ಮೂಲಕವೇ ಪ್ರಸಿದ್ಧಿ ಪಡೆದಿದ್ದ ಕಲ್ಲಡ್ಕ ಲಕ್ಷ್ಮೀ ನಿವಾಸ ಹೊಟೇಲ್ ಕೂಡಾ ತೆರವು ಮಾಡಲಾಗಿದೆ.

ಭಾರೀ ಹೆಸರುಗಳಿಸಿದ್ದ ಕಲ್ಲಡ್ಕ ಟೀ ಇನ್ನು ನೆನಪು ಮಾತ್ರ. 107 ವರ್ಷಗಳ ಇತಿಹಾಸವಿರುವ ಕಲ್ಲಡ್ಕ ಟೀ ಹೊಟೇಲ್ ಎಂದೇ ಖ್ಯಾತಿಯಾಗಿದ್ದ ಲಕ್ಷ್ಮೀ ನಿವಾಸ ಹೊಟೇಲ್ ಹೆದ್ದಾರಿ ಅಗಲೀಕರಣಕ್ಕಾಗಿ ತೆರವಾಗಿದೆ. ಹಳೆಯ ಹೊಟೇಲ್‌ನಲ್ಲಿ ಸಿಗುತ್ತಿದ್ದ ಕೆ. ಟಿ. ಚಹಾ ಇನ್ನೂ ಹಲವು ತಿಂಗಳ ಕಾಲ ಗ್ರಾಹರಿಗೆ ಸಿಗುವುದಿಲ್ಲ.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم