ಸುಳ್ಯ ; ತಾಲೂಕಿನ ಐವರ್ನಾಡಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಸಂಜೀವಿನಿ ಒಕ್ಕೂಟದ ಕಚೇರಿ ಅ.13 ರಂದು ಶುಭಾರಂಭಗೊಂಡಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ನೂತನ ಕಚೇರಿಯನ್ನು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ,ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಪಿ.ಡಿ.ಒ ಶ್ಯಾಮ್ ಪ್ರಸಾದ್,ಸಂಜೀವಿನಿಯ ತಾಲೂಕು ಪ್ರೋಗ್ರಾಮ್ ಮೆನೇಜರ್ ಶ್ರೀಮತಿ ಶ್ವೇತ,ಮೇಲ್ವಿಚಾರಕ ಮಹೇಶ್, ವಲಯ ಮೇಲ್ವಿಚಾರಕ ಅವಿನಾಶ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ, ಶ್ರೀಮತಿ ರಾಜೀವಿ ಲಾವಂತಡ್ಕ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಶೀಲ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಅಮಿತ ಲಾವಂತಡ್ಕ ಸ್ವಾಗತಿಸಿ, ಎಲ್.ಸಿ.ಆರ್.ಪಿ.ಸುಮಿತ್ರ ಕಿರುಪರಿಚಯ ಮಾಡಿದರು. ಎಲ್.ಸಿ.ಆರ್.ಪಿ.ಮಮತಾ ವಂದಿಸಿದರು.
إرسال تعليق