ನರನಾಡಿಯಲ್ಲೂ ಹರಿಯುವ
ದೇಶಾಭಿಮಾನದ ರಕ್ತ...
ಶಾಂತಿದೂತ ಗಾಂಧಿತಾತ.
ಕಾಯಕ ತತ್ತ್ವದ ಬಗ್ಗೆ ನಿಮ್ಮಯ ಒಲವು,
ಮೂಡಿಸಿದಿರಿ ಸ್ವಾವಲಂಬನೆಯ ಅರಿವು.
ಹೋರಾಟದಲಿ ಸಮಾನತೆಯ ಕಾಯಕಲ್ಪ...
ಸ್ವದೇಶೀ ಚಳುವಳಿ ಆಯ್ತು ನಮಗೆ ದಾರಿದೀಪ.
ತಲೆ ತಲಾಂತರ ಜಪಿಸಿದರು ಶಾಂತಿಯ ಮಂತ್ರ,
ಭಾರತ ದೇಶದ ಒಲವಿನ ಪುತ್ರ.
ಸ್ವತಂತ್ರ ಭಾರತವಿಂದು ಪಾವನ...
ಗಾಂಧಿಗಿಂದು ಜನ್ಮದಿನ.
-ನಾರಾಯಣ. ಕುಂಬ್ರ,
ಲ್ಯಾಬ್ ಸಹಾಯಕರು, ರಸಾಯನ ಶಾಸ್ತ್ರ ವಿಭಾಗ,
ವಿವೇಕಾನಂದ ಕಾಲೇಜು. ಪುತ್ತೂರು.
إرسال تعليق