ಬೆಂಗಳೂರು: ಪತಿ ಸಾವಿನಿಂದ ಮನನೊಂದು ಇಬ್ಬರ ಮಕ್ಕಳ ಜೊತೆ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಗರದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.
ತೋಟದ ಗುಡ್ಡದಹಳ್ಳಿ ಹತ್ತಿರದ ಪ್ರಕೃತಿ ಲೇಔಟ್‌ನ ವಸಂತ(40 ವರ್ಷ), ಯಶವಂತ್ (15 ವರ್ಷ) ಹಾಗೂ ನಿಶ್ಚಿತಾ (8 ವರ್ಷ) ಮೃತ ದುರ್ದೈವಿಗಳು.
ಮನೆಯಲ್ಲಿ ತನ್ನ ಇಬ್ಬರು ಮಕ್ಕಳ ಜೊತೆ ವಸಂತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಮನೆಗೆ ಸಂಬಂಧಿಕರು ರಾತ್ರಿ ಬಂದಾಗ ಘಟನೆಯೊಂದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಿಎಂಟಿಸಿ ಚಾಲಕ ನಿರ್ವಾಹಕರಾಗಿದ್ದ ವಸಂತ ಅವರ ಪತಿಯು ಕಳೆದ ವರ್ಷ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು.
ಇದರಿಂದ ಮಾನಸಿಕವಾಗಿ ಮನನೊಂದು ಅವರು, ಈ ಬೇಸರದಲ್ಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಒಂದೇ ಫ್ಯಾನ್‌ಗೆ ಮಗಳು ಹಾಗೂ ವಸಂತ ನೇಣು ಹಾಕಿಕೊಂಡಿದ್ದು, ಯಶವಂತ್ ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق