ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.2ರಂದು ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸತ್ಯ ಅಹಿಂಸೆ ತ್ಯಾಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ನಮ್ಮ ದೇಶಕ್ಕೆ ಮಾತ್ರ. ನುಡಿದಂತೆ ನಡೆದ ವ್ಯಕ್ತಿತ್ವ ಮಹಾತ್ಮಾ ಗಾಂಧಿಯವರದ್ದು. ನಮ್ಮ ದೇಶದಲ್ಲಿ ಮಾತ್ರವಲ್ಲ ಇತರ ದೇಶದಲ್ಲೂ ಅವರ ಶಾಂತಿಯ ಧ್ಯೇಯ ವಾಕ್ಯಗಳು ಬಹಳ ಪ್ರಖ್ಯಾತವಾಗಿದೆ. ಹೀಗೆ ನಾಯಕರುಗಳ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಶ್ರೀಮತಿ ಶಿಭಾ ಪಿ.ಜೆ ಹೇಳಿದರು.
ಇನ್ನು ಗೃಹವಿಲ್ಲದ ಗೃಹಮಂತ್ರಿಯಾಗಿದ್ದ ಶಾಸ್ತ್ರೀಜಿಯವರ ಸರಳ ಸುಂದರ ವ್ಯಕ್ತಿತ್ವದ ಬಗ್ಗೆಯೂ ಹಲವು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಅವರು ತಿಳಿಸಿದರು. ನಂತರ ಶಿಕ್ಷಕರು ಸರ್ವಧರ್ಮ ಪ್ರಾರ್ಥನೆ ಹಾಗೂ ಭಜನೆಯನ್ನು ನಡೆಸಿ, ಗಾಂಧೀಜಿಯವರ ಹಾಗೂ ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಶ್ರೀಯುತ ಅನಂತ ಪದ್ಮನಾಭ ಭಟ್ ಹಾಗೂ ಅವರ ಕುಟುಂಬದವರು, ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق