ಉಜಿರೆ: ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಅ.6 ರಿಂದ 14 ರ ವರೆಗೆ ಪ್ರತಿ ದಿನ ಸಂಜೆ ಗಂಟೆ 6 ರಿಂದ ರಾತ್ರಿ 8 ಗಂಟೆ ವರೆಗೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಗಳ ವಿವರ:
ಅ. 6 (ಬುಧವಾರ): ಅನಸೂಯ ಫಾಟಕ್, ಉಜಿರೆ, (ಶಾಸ್ತ್ರೀಯ ಸಂಗೀತ), ಅ.7 (ಗುರುವಾರ): ಮಧೂರು ವಿಷ್ಣುಪ್ರಸಾದ್ ಕಲ್ಲೂರಾಯ, ಗೇರುಕಟ್ಟೆ (ದಾಸ ಸಂಕೀರ್ತನೆ), ಅ.8 (ಶುಕ್ರವಾರ) ಐ. ಗಿರೀಶ್ ನಾಗೇಶ್ ಪ್ರಭು, ಮಂಗಳೂರು (ಭಕ್ತಿ ಸಂಗೀತ), ಅ. 9 (ಶನಿವಾರ): ಕುಮಾರಿ ಸುಪ್ರೀತಾ, ಧರ್ಮಸ್ಥಳ (ಶಾಸ್ತ್ರೀಯ ಸಂಗೀತ), ಅ.10 (ಭಾನುವಾರ): ಡಾ. ಪ್ರತಿಭಾ ರೈ, ಮಂಗಳೂರು (ಭಕ್ತಿ-ಭಾವ ಸಂಗೀತ), ಅ. 11 (ಸೋಮವಾರ): ಭಾರತೀಗೋಪಾಲ್, ಶಿವಪುರ, ಉಡುಪಿ (ಸ್ಯಾಕ್ಸೋಫೋನ್ ವಾದನ), ಅ. 12 (ಮಂಗಳವಾರ): ವಿದುಷಿ ಸುಚಿತ್ರಾ ಹೊಳ್ಳ, ಪುತ್ತೂರು (ಶಾಸ್ತ್ರೀಯ ಸಂಗೀತ) ಅ.13 (ಬುಧವಾರ): ಸುಷ್ಮಾ ಸಂತೋಷ್, ಬೆಂಗಳೂರು (ಭಕ್ತಿ ಸಂಗೀತ), ಅ. 14 (ಗುರುವಾರ): ಬಿ. ಜೆ. ಮಹೇಂದ್ರ ಕುಮಾರ್ ಮತ್ತು ಬಳಗ, ಶಿವಮೊಗ್ಗ (ಭಕ್ತಿ ಸಂಗೀತ).
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق