ಬಂಟ್ವಾಳ: ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ, ನಿಯಮಿತ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಹಡಿಲು ಬಿದ್ದ ಗದ್ದೆಗಳನ್ನೂ ಸಾಗುವಳಿ ಮಾಡಿದ ಸಂಗಬೆಟ್ಟು ಗ್ರಾಮದ ಕಣಿಯೂರು ನಿವಾಸಿ ದೇವಪ್ಪ ಗೌಡರವರ ಭತ್ತ ಪೈರು ಗದ್ದೆಗಳನ್ನು ಸಿದ್ದಕಟ್ಟೆ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ನೇತೃತ್ವದ ಆಡಳಿತ ಮಂಡಳಿ ತಂಡ ವೀಕ್ಸಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ ಆಳಕ್ಕೆ, ನಿರ್ದೇಶಕರಾದ ಸಂದೇಶ ಶೆಟ್ಟಿ ಪೋಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಉಮೇಶ್ ಗೌಡ, ದಿನೇಶ್ ಪೂಜಾರಿ ಹುಲಿಮೇರು, ದೇವರಾಜ್ ಸಾಲಿಯಾನ್, ಮಾಧವ ಶೆಟ್ಟಿಗಾರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ, ಕೃಷಿಕ ದೇವಪ್ಪ ಗೌಡ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق