ಪೆರ್ಲ: ಕೇರಳ ಸರಕಾರದ ಸಂಯೋಜಿತ ಶಿಶು ವಿಕಸನ ಯೋಜನೆಯಾದ ಐಸಿಡಿಎಸ್ ನ 46ನೇ ವಾರ್ಷಿಕೋತ್ಸವದ ಅಂಗವಾಗಿ ಎಣ್ಮಕಜೆ ಗ್ರಾಮ ಪಂಚಾಯತ್ ಮಟ್ಟದ ಐಸಿಡಿಎಸ್ ವಾರ್ಷಿಕೋತ್ಸವ ಆಚರಣೆ ಎಣ್ಮಕಜೆ ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ಐಸಿಡಿಎಸ್ ಸೇವಾ ಕಾರ್ಯಗಳ ಬಗ್ಗೆ ಜನಪರವಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಧ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ಮಂಜೇಶ್ವರ ಆಡಿಶನಲ್ ಸಿಡಿಪಿಒ ಲತಾ ಕುಮಾರಿ ಟಿ.ಆರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಂ.ಉಪಾಧ್ಯಕ್ಷೆ ಡಾ. ಫಾತಿಮತ್ ಝಹನಾಸ್, ಪಂ. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್. ಗಾಂಭೀರ್, ಜಯಶ್ರೀ ಎ.ಕುಲಾಲ್, ಸೌದಾಬಿ, ಹನೀಫ್ ನಡುಬೈಲ್ ಹಾಗೂ ಪಂಚಾಯತು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಐಸಿಡಿಎಸ್ ಕಾರ್ಯ ಚಟುವಟಿಕೆಗಳ ಬಗೆಗಿನ ಭಿತ್ತಿ ಪತ್ರ (ಪೋಸ್ಟರ್)ಗಳು, ಅಂಗನವಾಡಿ ಮಕ್ಕಳ ಕಲಿಕೋಪಕರಣಗಳು ಆಹಾರೋತ್ಪನ್ನಗಳು ಪ್ರದರ್ಶನದಲ್ಲಿ ಗಮನ ಸೆಳೆದವು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق