ಬಾಗಲಕೋಟೆ: ಮಲಪ್ರಭಾ ನದಿಯಲ್ಲಿ ಈಜು ಕಲಿಯಲು ಹೋಗಿದ್ದ ಗುಳೇದಗುಡ್ಡ ತಾಲ್ಲೂಕಿನ ಕೊಟ್ನೂರು ಗ್ರಾಮದ ಇಬ್ಬರು ಬಾಲಕರು ಶುಕ್ರವಾರ ಮಧ್ಯಾಹ್ನ ನೀರುಪಾಲಾಗಿದ್ದಾರೆ.
ಗ್ರಾಮದ ಬೈಲಪ್ಪ ಅಂಬಿಗೇರ ಅವರ ಪುತ್ರ ಮಲ್ಲೇಶ (12)ವರ್ಷ ಹಾಗೂ ಮಲ್ಲಪ್ಪ ಉಪ್ಪಾರ ಅವರ ಪುತ್ರ ಮನೋಜ (10)ವರ್ಷ ಸಾವಿಗೀಡಾದವರು.
ಶಾಲೆಗೆ ರಜೆ ಇದ್ದ ಕಾರಣ ಇಬ್ಬರು ಈಜು ಕಲಿಯಲು ನದಿಗೆ ತೆರಳಿದ್ದರು. ಈ ವೇಳೆಯಲ್ಲಿ ನೀರಿನ ಸೆಳತಕ್ಕೆ ಸಿಲುಕಿ ಮುಳುಗಿದ್ದಾರೆ ಎಂದು ತಿಳಿದು ಬಂದಿದೆ.
ಗುಳೇದಗುಡ್ಡದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಶವಗಳನ್ನು ಹೊರತೆಗೆದು ಪಾಲಕರಿಗೆ ಒಪ್ಪಿಸಿದರು.
ಈ ಬಗ್ಗೆ ಗುಳೇದಗುಡ್ಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
إرسال تعليق