ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಳ್ಯ; ಚಂದನ ಸಾಹಿತ್ಯ ವೇದಿಕೆಯ ವತಿಯಿಂದ ದಸರಾ ಕವಿಗೋಷ್ಠಿ

ಸುಳ್ಯ; ಚಂದನ ಸಾಹಿತ್ಯ ವೇದಿಕೆಯ ವತಿಯಿಂದ ದಸರಾ ಕವಿಗೋಷ್ಠಿ

 


ಸುಳ್ಯ; ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ನಡೆದ ದಸರಾ ಕವಿಗೋಷ್ಠಿ ಮತ್ತು ದಸರಾ ಕವಿ ಅಭಿನಂದನಾ  ಕಾರ್ಯಕ್ರಮವು ಸುಳ್ಯದ ಕಾನತ್ತಿಲ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.


 ಖ್ಯಾತ ಚಿತ್ರ ಕಲಾವಿದರಾದ ಬಿ.ಕೆ.ಮಾಧವ ರಾವ್ ಮಂಗಳೂರುರವರು ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿದ್ದರು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಭೀಮರಾವ್ ವಾಷ್ಠರ್ ರವರು ಪ್ರಾಸ್ತಾವಿಕವಾಗಿ  ಮಾತನಾಡಿದರು .


 ದಸರಾ ಕವಿಗೋಷ್ಠಿಯನ್ನು ಸತ್ಯಶಾಂತ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆ ಮತ್ತು ಮಹಿಳಾ ಸಾಹಿತಿ ಶಾಂತಾ ಕುಂಟಿನಿ ಉದ್ಘಾಟಿಸಿದರು. ಹಿರಿಯ ಸಾಹಿತಿ ನರಸಿಂಹ ಉಪಾಧ್ಯಾಯರವರು ಕವಿಗೋಷ್ಠಿಯ  ಅಧ್ಯಕ್ಷತೆ ವಹಿಸಿದ್ದರು.


 ತಮಿಳು ಕಲಾವಿದರ ವೇದಿಕೆಯ ಅಧ್ಯಕ್ಷ ಕನ್ನದಾಸನ್ ಎಸ್.ಕುಕ್ಕಂದೂರು, ಜೆಸಿ ಸಂಸ್ಥೆಯ ಬಶೀರ್ ಯು.ಪಿ. ಅತಿಥಿಗಳಾಗಿದ್ದರು.  ದಸರಾ ಕವಿಗೋಷ್ಠಿಯಲ್ಲಿ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್.ಭೀಮರಾವ್ ವಾಷ್ಠರ್ ರವರು ಚಂದನ ದಸರಾ ಕವಿಯಾಗಿ ಆಯ್ಕೆಯಾದ ಪರಿಮಳ ಐವರ್ನಾಡು ಅವರಿಗೆ ಚಂದನ ಕುಸುಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.  


 ಕವಿಗೋಷ್ಠಿಯಲ್ಲಿ  ರಾಮಕೃಷ್ಣ ಸವಣೂರು , ರಶ್ಮಿ ಸನಿಲ್ ಮಂಗಳೂರು , ನಾರಾಯಣ್ ಕುಂಬ್ರ , ಪೂರ್ಣಿಮಾ ಪೆರ್ಲಂಪಾಡಿ , ವಿಜಯಕುಮಾರ್ ಕಾಣಿಚ್ಚಾರ್ , ಪೆರುಮಾಳ್ ಲಕ್ಷ್ಮಣ್ ಐವರ್ನಾಡು , ಬಿ ಕೆ ಉಮೇಶ್ ಆಚಾರ್ಯ ಜಟ್ಟಿಪಳ್ಳ , ನವೀನ್ ಕುಲಾಲ್ ಚಿಪ್ಪಾರು  , ಅನುರಾಧಾ ಶಿವಪ್ರಕಾಶ್ , ಪವನ್ ಕುಮಾರ್ ಕೆ , ಸುಮಾ ಕಿರಣ್ ಮಣಿಪಾಲ್ , ಆಶಾಮಯ್ಯ ಪುತ್ತೂರು , ಉಮಾಶಂಕರಿ ಮರಿಕೆ , ಶ್ರೀಮತಿ ರೇಖಾ ಸುದೇಶ್ ರಾವ್ ಮಂಗಳೂರು ,  ಎಮ್ ಎ ಮುಸ್ತಫಾ ಬೆಳ್ಳಾರೆ , ಹಿಮಾಲಿ ಮಡ್ತಿಲ , ಕೇಶವ ಪುತ್ತೂರು ,  ಚಂದ್ರಮೌಳಿ ಪಾಣಾಜೆ , ಕುಸುಮಾಧರ್ ಅಂಬೆಕಲ್ಲು , ಅಪೂರ್ವ ಕಾರಂತ್ , ಅಶ್ರಫ್ ಪರ್ಪುಂಜ , ಲತಾ ಬನಾರಿ ಕಾಸರಗೋಡು , ಶರ್ವಾ  ಸುಳ್ಯ , ಸಂಧ್ಯಾ ಕುಮಾರ್ , ಸುಮಂಗಲ ಲಕ್ಷ್ಮಣ್ , ಪ್ರೇಮಾ ಉದಯಕುಮಾರ್ , ಕುಮಾರ್ ಸಾಯಿಪ್ರಶಾಂತ್ ಇನ್ನಿತರರು ಕವಿಗೋಷ್ಠಿಯಲ್ಲಿ  ಭಾಗವಹಿಸಿ ತಮ್ಮ ಸ್ವರಚಿತ ಕವನ ವಾಚನ ಮಾಡಿದರು . 


ಪರಿಮಳ ಐವರ್ನಾಡು ರವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಮಂಗಲ ಲಕ್ಷ್ಮಣ ಕೋಳಿವಾಡರವರು ಕಾರ್ಯಕ್ರಮ ನಿರೂಪಿಸಿದರು .

0 تعليقات

إرسال تعليق

Post a Comment (0)

أحدث أقدم