ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರು ಮತ್ತು ಬೈಕ್ ಅಪಘಾತ; ಬೈಕ್ ಸವಾರರು ಸಾವು

ಕಾರು ಮತ್ತು ಬೈಕ್ ಅಪಘಾತ; ಬೈಕ್ ಸವಾರರು ಸಾವು

 



ತಿಪಟೂರು: ತಾಲ್ಲೂಕಿನ ಬಳುವನೆರಲು ಗ್ರಾಮದ ಗೇಟ್ ಬಳಿ ಬುಧವಾರ ವೇಗದಿಂದ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬಳುವನೆರಲು ಗ್ರಾಮದ ನಾಗಣ್ಣ (65), ಹಾಲಿನ ಡೇರಿ ಮಾಜಿ ಕಾರ್ಯದರ್ಶಿ, ಬಿ.ಮುದ್ದೇನಹಳ್ಳಿ ಗ್ರಾಮದ ಚಿದಾನಂದ್ (55) ವರ್ಷದ ಮೃತರು.

ಬಳುವನೆರಲು ಗೇಟ್ ಬಳಿ ಹೊನ್ನವಳ್ಳಿ ಠಾಣೆಯ ಪೊಲೀಸ್ ಸಿಬ್ಬಂದಿ ಗೇಟ್ ಬಳಿಯಲ್ಲಿ ವಾಹನ ಚಾಲಕರಿಗೆ ದಂಡ ವಿಧಿಸುತ್ತಿದ್ದರು. ಇದನ್ನು ಗಮನಿಸಿದ ಕಾರ್‌ ಚಾಲಕರು ವೇಗವನ್ನು ಹೆಚ್ಚಿಸಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ರಭಸಕ್ಕೆ ವಾಹನ ಹತೋಟಿಗೆ ಸಿಗದೆ ಎದುರಿಗೆ ಬರುತ್ತಿದ್ದ ಬೈಕ್‌ಗೆ ಗುದ್ದಿದ್ದಾರೆ. ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌ ಜಯಲಕ್ಷ್ಮಮ್ಮ ತೆರಳಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಸೂಕ್ತ ಕ್ರಮ ಜರುಗಿಸುವ ಭರವಸನೆ ನೀಡಿದರು.

0 تعليقات

إرسال تعليق

Post a Comment (0)

أحدث أقدم