ದಾವಣಗೆರೆ: ತಾಲ್ಲೂಕಿನ ಮೆಳ್ಳೆಕಟ್ಟೆ ಗ್ರಾಮದ ಸಮೀಪ ಬ್ರೇಕ್ ಫೈಲಾಗಿ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರು ಅಪಾಯವಿಲ್ಲದೇ ಪಾರಾಗಿದ್ದಾರೆ.
ಜಗಳೂರಿನಿಂದ ದಾವಣಗೆರೆ ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ಬಸ್ ಮೆಳ್ಳೆಕಟ್ಟೆ ಗ್ರಾಮದ ಇಳಿಜಾರು ರಸ್ತೆಯಲ್ಲಿ ಬರುತ್ತಿದ್ದಾಗ ಬ್ರೇಕ್ ವಿಫಲವಾಗಿದೆ.
ಬಸ್ ನಿಯಂತ್ರಣ ಮಾಡಲು ಚಾಲಕ ಪ್ರಯತ್ನಿಸಿದಾಗ ಪಕ್ಕದಲ್ಲಿದ್ದ ಜೋಡಿ ವಿದ್ಯುತ್ ಕಂಬಕ್ಕೆ ರಭಸವಾಗಿ ಗುದ್ದಿದೆ. ಎರಡೂ ಕಂಬಗಳು ತುಂಡಾಗಿ ವಿದ್ಯುತ್ ಲೈನ್ ಬಸ್ ಮೇಲೆ ಬಿದ್ದಿದೆ. ಚಾಲಕ ಸೇರಿದಂತೆ ಎಲ್ಲ ಪ್ರಯಾಣಿಕರು ಯಾವುದೇ ಅನಾಹುತ ಇಲ್ಲದೆ ಸುರಕ್ಷಿತರಾಗಿದ್ದಾರೆ.
إرسال تعليق