ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಪ್ಟ್ರೀಯ ರಕ್ತದಾನಿಗಳ ದಿನದ ಅಂಗವಾಗಿ ಉಳ್ಳಾಲ ಘಟಕದ ವತಿಯಿಂದ ರಕ್ತದಾನ ಶಿಬಿರ

ರಾಪ್ಟ್ರೀಯ ರಕ್ತದಾನಿಗಳ ದಿನದ ಅಂಗವಾಗಿ ಉಳ್ಳಾಲ ಘಟಕದ ವತಿಯಿಂದ ರಕ್ತದಾನ ಶಿಬಿರ

 



ಉಳ್ಳಾಲ: ರಾಷ್ಟ್ರೀಯ ರಕ್ತದಾನಿಗಳ ದಿನದ ಅಂಗವಾಗಿ ಮತ್ತು ಉಳ್ಳಾಲ ಘಟಕದ 1ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ದಳದ ಸಂಯುಕ್ತ ಆಶ್ರಯದಲ್ಲಿ ಹಾಗೂ ಲಯನ್ಸ್ ಕ್ಲ್ಲಬ್ ಮಂಗಳೂರು ಮತ್ತು ಲಿಯೋ ಕ್ಲಬ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಮತ್ತು ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ರಕ್ತನಿಧಿ ಇವರ ಸಹಕಾರದೊಂದಿಗೆ ಇಂದು ರಕ್ತದಾನ ಶಿಬಿರವು ಉಳ್ಳಾಲ ಘಟಕದ ಸಂತ ಸೆಬಾಸ್ಟಿಯನ್ ಆಂಗ್ಲಮಾಧ್ಯಮ ಶಾಲೆ ಆಡಂಕುದ್ರು ಇಲ್ಲಿ ಜರುಗಿತು.


ಈ ಸಂದರ್ಭದಲ್ಲಿ ಶ್ರೀ ಮೋಹನ್ ಶಿರ್ಲಾಲ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು, ಮಂಗಳೂರು, ಪೂರ್ವಾಧ್ಯಕ್ಷರು ಜೆಸಿಐ, ಮಂಗಳ ಗಂಗೋತ್ರಿ ಕೋಣಾಜೆ, ಇವರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗೃಹರಕ್ಷಕರು ನಿಷ್ಕಾಮ ಸೇವೆ ಸಲ್ಲಿಸುವುದರ ಜೊತೆಗೆ ರಕ್ತದಾನವನ್ನು ಮಾಡುತ್ತಿರುವುದು  ಶ್ಲಾಘನೀಯ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಗೃಹರಕ್ಷಕರು ಜನರ  ಸ್ವಾಸ್ಥ್ಯವನ್ನೂ ಕಾಪಾಡುವುದು ಅತ್ಯಂತ ಧನಾತ್ಮಕ ಬೆಳವಣಿಗೆಯಾಗಿದೆ. ಇಂತಹ ಗೃಹರಕ್ಷಕರೇ ದೇಶದ ಬಹುದೊಡ್ಡ ಆಸ್ತಿ ಎಂದರೂ ತಪ್ಪಾಗಲಾರದು ಎಂದು ನುಡಿದರು.


ಮುಖ್ಯ ಅತಿಥಿಗಳಾಗಿ ವೆನ್‍ಲಾಕ್ ಆಸ್ಪತ್ರೆಯ ಡಾ|| ಶರತ್ ಕುಮಾರ್ ಇವರು  ಮಾತನಾಡಿ ಗೃಹರಕ್ಷಕರು ನಿರಂತರವಾಗಿ ರಕ್ತದಾನ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿಯೂ ಸಹ ಗೃಹರಕ್ಷಕರು ಮುಂದೆ ನಿಂತು ರಕ್ತದಾನ ಶಿಬಿರವನ್ನು ಆಯೋಜಿಸಿ ರಕ್ತದಾನ ಮಾಡಿರುತ್ತಾರೆ. ಕಳೆದ ಒಂದು ವರ್ಷಗಳಲ್ಲಿ ನಾಲ್ಕು ರಕ್ತದಾನ ಶಿಬಿರಗಳನ್ನು ಗೃಹರಕ್ಷಕರು ಆಯೋಜಿಸಿರುತ್ತಾರೆ. ಸಮಾಜಮುಖಿ ಚಿಂತನೆಗಳನ್ನು ಜನರಲ್ಲಿ ಮೂಡಿಸುವಲ್ಲಿ ಗೃಹರಕ್ಷಕರ ಪಾತ್ರ ಬಹಳ ದೊಡ್ಡದು ಎಂದು ಅವರು ನುಡಿದರು. ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲಯನ್ ಬಿ. ಸತೀಶ್ ರೈ ಅವರು ಮಾತನಾಡಿ ಗೃಹರಕ್ಷಕರೆಲ್ಲ ಚಟುವಟಿಕೆಗಳಿಗೆ ನಾವು ಎಂದಿಗೂ ಸಹಕಾರ ನೀಡುತ್ತೇವೆ. ಯಾವುದೇ ಸಮಾಜಮುಖಿ ಕೆಲಸಗಳಿಗೆ  ಲಯನ್ ಸೇವಾ ಸಂಸ್ಥೆ ಕಟಿಬದ್ಧವಾಗಿದೆ ಎಂದು ನುಡಿದರು.


ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ. ರಕ್ತದಾನಕ್ಕಿಂತ ಮಿಗಿಲಾದ ದಾನ  ಇನ್ನೊಂದಿಲ್ಲ. ರಕ್ತದಾನ ಮಾಡುವುದರಿಂದ ಇತರರ ಜೀವ ಉಳಿಸಿದ ಸಾರ್ಥಕತೆ ನಿಮ್ಮದಾಗುತ್ತದೆ. ನಿರಂತರ ರಕ್ತದಾನ ಮಾಡುವುದರಿಂದ ನಿಮ್ಮ ಆರೋಗ್ಯವೂ ವೃದ್ಧಿಸುತ್ತದೆ. ಇತರರ ಜೀವವೂ ಉಳಿಯುತ್ತದೆ. ವರ್ಷದಲ್ಲಿ  ಮೂರು ಬಾರಿಯಾದರೂ  ರಕ್ತದಾನ ಮಾಡಬೇಕು ಎಂದು ಗೃಹರಕ್ಷಕರಿಗೆ ಕರೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಉಪ ಸಮಾದೇಷ್ಟರಾದ ಶ್ರೀ ರಮೇಶ್ ಇವರು ಪ್ರಸ್ತಾವಿಕವಾಗಿ ಮಾತನಾಡಿದರು.


ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಶ್ರೀ ಲಯನ್ ಬಿ. ಸತೀಶ್ ರೈ, ಲಯನ್ಸ್ ಕಾರ್ಯದರ್ಶಿ ರಾಜೇಶ್ವರಿ ಮತ್ತು ಲಿಯೋ ಕ್ಲಬ್ ಅಧ್ಯಕ್ಷರಾದ ನಿರ್ಮಲಾ ಹೇರಿ, ಜೊತೆಕಾರ್ಯದರ್ಶಿ ಗುರುಪ್ರೀತ್ ಆಳ್ವ ಹಾಗೂ ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿಯಾದ ಭಾಸ್ಕರ್ ಹಾಗೂ ಗೃಹರಕ್ಷಕ, ಗೃಹರಕ್ಷಕಿಯರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಸುಮಾರು 25 ಮಂದಿ ಗೃಹರಕ್ಷಕರು ಮತ್ತು ಗೃಹರಕ್ಷಕಿಯರು ರಕ್ತದಾನ ಮಾಡಿದರು.


ಈ ಸಂದರ್ಭದಲ್ಲಿ ಉಳ್ಳಾಲ ಘಟಕದ ಗೃಹರಕ್ಷಕ ಸುನೀಲ್ ಪೂಜಾರಿ ಹಾಗೂ ಮಂಗಳೂರು ಘಟಕದ ಗೃಹರಕ್ಷಕ ಸುನೀಲ್ ಕುಮಾರ್ ಪಿ, ಇವರನ್ನು ಸನ್ಮಾನಿಸಲಾಯಿತು ಮತ್ತು ಉಳ್ಳಾಲ ಘಟಕದ ಗೃಹರಕ್ಷಕದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಗೃಹರಕ್ಷಕಿ ಯಶವಂತಿ ಉಚ್ಚಿಲ ಇವರ ಮಗಳಾದ ಕುಮಾರಿ ತನುಷಾ, ಪ್ರಭಾರ ಘಟಕಾಧಿಕಾರಿ ಶ್ರೀ ಭಾಸ್ಕರ್ ಅವರ ಮಗಳಾದ ಕುಮಾರಿ ತನ್ಮಯಿ ಬಿ, ಗೃಹರಕ್ಷಕ ಶ್ರೀ ದೀಪಕ್ ರಾಜ್ ಅವರ ಮಗಳಾದ ಕುಮಾರಿ ಹಿಮಾಂಗಿ ಡಿ. ಇವರುಗಳನ್ನು ಸನ್ಮಾನಿಸಲಾಯಿತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم