ಹಾಸನ: ಬೈಕ್ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ತಂದೆ-ಮಗಳು ಸಾವನ್ನಪ್ಪಿರುವ ಘಟನೆಯೊಂದು ಅರಸೀಕೆರೆ ತಾಲೂಕಿನ ಗಂಡಸಿ ಬಳಿಯ ಸೆಂಟ್ ಜಾನ್ಸ್ ಸ್ಕೂಲ್ ಬಳಿ ನಡೆದಿದೆ.
ಸಿದ್ದಾಪುರ ಗ್ರಾಮದ ಬೀರೇಗೌಡ (43) ವರ್ಷ ಹಾಗೂ ಮೋಕ್ಷಾ (13) ವರ್ಷ ಮೃತ ದುರ್ದೈವಿಗಳು. ತಂದೆ-ಮಗಳು ಬೈಕ್ನಲ್ಲಿ ಗಂಡಸಿಯಿಂದ ಸಿದ್ದಾಪುರಕ್ಕೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಅರಸೀಕೆರೆಯಿಂದ ಗಂಡಸಿಗೆ ಕಡೆಗೆ ಹೋಗುತ್ತಿದ್ದ ಚೆವ್ರೊಲೆಟ್ ಟಾವೆರಾ ವಾಹನ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರು ಕರ್ನಾಟಕ ದಲಿತ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾಗರಹಳ್ಳಿ ಚಂದ್ರು ಎಂಬುವವರಿಗೆ ಸೇರಿದ್ದು, ರಭಸದಿಂದ ಚಲಾಯಿಸಿದ್ದರಿಂದ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ನಂತರ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
Post a Comment