ಬೆಳಗಾವಿ: ಇಲ್ಲಿನ ಜಿಲ್ಲೆ ಚಿಕ್ಕೋಡಿ ಸಮೀಪದ ಆಲೂರು ಕೆಎಂ ಗ್ರಾಮದಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ.
ಹುಕ್ಕೇರಿ ತಾಲೂಕಿನ ಬಾಡ ಗ್ರಾಮದ ವಂದನಾ(30)ವರ್ಷ ಹಲ್ಲೆಗೊಳಗಾದ ಮಹಿಳೆ ಎಂದು ಹೇಳಲಾಗಿದೆ.
ನಾಗನೂರು ಗ್ರಾಮದ ವಿನೋದ್(28)ವರ್ಷದ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಸಂಕೇಶ್ವರದಿಂದ ಬಾಡ ಗ್ರಾಮಕ್ಕೆ ಬಸ್ ತೆರಳುತ್ತಿದ್ದ ವೇಳೆ ಆಲೂರು ಗ್ರಾಮದ ಬಳಿ ಬಸ್ ಒಳಗೆ ಬಂದ ಆರೋಪಿ ಮಹಿಳೆ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ತಡೆಯಲು ಹೋದ ಸಹಪ್ರಯಾಣಿಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಕೇಶ್ವರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Post a Comment