ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾತೃತ್ವಮ್ ವತಿಯಿಂದ ಬಜಕೂಡ್ಳು ಅಮೃತಧಾರಾ ಗೋಶಾಲೆಗೆ ಹಿಂಡಿ ಸಮರ್ಪಣೆ

ಮಾತೃತ್ವಮ್ ವತಿಯಿಂದ ಬಜಕೂಡ್ಳು ಅಮೃತಧಾರಾ ಗೋಶಾಲೆಗೆ ಹಿಂಡಿ ಸಮರ್ಪಣೆ


 

ಬಜಕೂಡ್ಲು (ಪೆರ್ಲ): ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ "ಮಾತೃತ್ವಮ್" ಸಂಘಟನೆಯ ಮಾತೆಯರಿಂದ ಇಂದು ಶುಕ್ರವಾರ (ಅ.1) ಸಂಜೆ 3 ಗಂಟೆಗೆ ಬಜಕೂಡ್ಲುವಿನ ಅಮೃತಧಾರಾ ಗೋಶಾಲೆಗೆ 90 ಗೋಣಿ (45 ಕ್ವಿಂಟಾಲ್) ಹಿಂಡಿ ಸಮರ್ಪಣೆ ನಡೆಯಿತು.


ಗುರುವಂದನೆ, ಗೋವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಪೂಜೆ, ಗೋಪೂಜೆಯನ್ನು ವೇದಮೂರ್ತಿ ಕೇಶವ ಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಎಣ್ಮಕಜೆ ವಲಯದ ರಾಮಾಯಣ ಸಿದ್ಧ ಬಿರುದಾಂಕಿತ ಬಿ.ವಿ‌. ನಾರಾಯಣ ಭಟ್ ನೆರವೇರಿಸಿದರು.


ನಂತರ ನಡೆದ ಸಭೆಯ ಅಧ್ಯಕ್ಷತೆಯನ್ನು ಮುಳ್ಳೇರಿಯಾ ಮಂಡಲ ಅಧ್ಯಕ್ಷರಾದ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ವಹಿಸಿದರು. ಕಾಸರಗೋಡು ನಗರ ಮಾತೃತ್ವಂವಿನ ಅಧ್ಯಕ್ಷೆ ಶ್ರೀಮತಿ ಕುಸುಮಾ ಪೆರ್ಮುಖ ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಕೇಂದ್ರ ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ದಿಕ್ಸೂಚಿ ಭಾಷಣದಲ್ಲಿ ಮಾತೃತ್ವಮ್ ಯೋಜನೆಯ ಬಗ್ಗೆ  ಹಾಗೂ ಅದರ ಕಾರ್ಯವಿಧಾನಗಳ ಕುರಿತು ವಿವರಣೆ ನೀಡಿದರು.


"ಇಡೀ ದೇಶದ ಜನಜೀವನದ ಜೀವನಾಡಿಯಾಗಿರುವ ಗೋಸಂಪತ್ತು ಇಂದು ಕ್ಷೀಣಿಸುತ್ತಿದೆ. ದೇಶೀ ಗೋಸಂತತಿ ವಿನಾಶದತ್ತ ಸಾಗುತ್ತಿದೆ. ನಮ್ಮೆಲ್ಲರ ಗೋಮಾತೆ ಕಟುಕರ ಕೈಸೆರೆಯಾಗುತ್ತಿದ್ದಾಳೆ. ಆಕೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಗೋವು ಉಳಿಯಲಿ, ಗೋವಿನ ಜೊತೆ ಮನುಕುಲವೂ ಉಳಿಯಲಿ, ಒಂದು ಗೋವು; ಒಂದು ಮಾತೆ ಎಂಬ ಗುರಿಯೊಂದಿಗೆ ಮಾತೃತ್ವಮ್ ನಿಮ್ಮ ಬಳಿ ಬಂದಿದೆ. ಬನ್ನಿ, ಮಾತೃತ್ವಮ್ ಸಂಘಟನೆಯ ಮೂಲಕ ಗೋಮಾತೆಯನ್ನು ಸಂರಕ್ಷಿಸೋಣ. ಮಾಸದ ಮಾತೆಯರಿಗೆ ಸಹಕರಿಸಿ ಗೋಸೇವೆಯ ಸಾರ್ಥಕತೆ ಪಡೆಯೋಣ" ಎಂದು ಕರೆ ನೀಡಿದರು.


ಗೋಶಾಲೆ ಅಧ್ಯಕ್ಷರಾದ ಜಗದೀಶ ಬಿ ಜಿ, ಕಾರ್ಯದರ್ಶಿ ತಿರುಮಲ ಪ್ರಸಾದ, ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ, ಕೋಶಾಧಿಕಾರಿ ಹರಿಪ್ರಸಾದ್ ಪೆರ್ಮುಖ, ಕಾಸರಗೋಡು ನಗರ ಸಭಾ ಮಾತೃತ್ವಮ್ ಕಾರ್ಯದರ್ಶಿ ಗೀತಾ ಲಕ್ಷ್ಮೀ, ಕೋಶಾಧಿಕಾರಿ ಶಿವಕುಮಾರಿ ಕುಂಚಿನಡ್ಕ, ವಲಯ ಸದಸ್ಯರು, ಮಾಸದ ಮಾತೆಯರು ಗೋ ಪ್ರೇಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಎಣ್ಮಕಜೆ ವಲಯ ಅಧ್ಯಕ್ಷರಾದ ಶಂಕರ ಪ್ರಸಾದ ಸ್ವಾಗತಿಸಿ ಕುಂಬ್ಳೆ ವಲಯ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ವಂದಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post