ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಂದೆ ಬೈದರೆಂದು ಮನೆ ಬಿಟ್ಟ ಬಾಲಕ ಆತ್ಮಹತ್ಯೆಗೆ ಯತ್ನ

ತಂದೆ ಬೈದರೆಂದು ಮನೆ ಬಿಟ್ಟ ಬಾಲಕ ಆತ್ಮಹತ್ಯೆಗೆ ಯತ್ನ

 


ಬೆಂಗಳೂರು: ತಂದೆ ಬೈದರೆಂದು ಮನೆ ಬಿಟ್ಟು ಬಂದ ಬಾಲಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ಮಹಾದೇವಪುರದಲ್ಲಿ ನಡೆದಿದೆ. ಹೆಚ್ಚಿನ ಅಂಕ ತೆಗೆದಿಲ್ಲ ಎಂದು 16 ವರ್ಷದ ಬಾಲಕನಿಗೆ ತಂದೆ ಬೈದಿದ್ದಾರೆ.

ಇಷ್ಟಕ್ಕೆ ಕೋಪಗೊಂಡ ಬಾಲಕ ಅಕ್ಟೋಬರ್ 23ರ ಮಧ್ಯಾಹ್ನ ಮನೆ ಬಿಟ್ಟು ಬಂದಿದ್ದು, ಮಹದೇವಪುರ ದಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದು ರಾತ್ರಿ 7 ಗಂಟೆಗೆ ಹೊರಡುವ ರೈಲಿನ ಕೆಳಗೆ ಮಲಗಿದ್ದಾನೆ.

ಬಳಿಕ ಟ್ರೈನ್ ಅಡಿಯಿಂದಲೇ ತಂದೆ ಬೈಯ ಬಾರದಿತ್ತು ಎಂದು ಸೆಲ್ಫಿ ವಿಡಿಯೋ ಮಾಡಿ ಅಂಕಲ್​ಗೆ ಸೆಂಡ್​ ಮಾಡಿದ್ದಾನೆ. ಅದರಲ್ಲಿ ಟ್ರೈನ್ ಅನೌನ್ಸ್ ಮೆಂಟ್ ಕೂಡ ರೆಕಾರ್ಡ್ ಆಗಿತ್ತು.

ವಿಷಯ ತಿಳಿದ ಪೋಷಕರು ಕೂಡಲೇ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದಾರೆ. ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಬಾಲಕ ಆತ್ಮಹತ್ಯೆಗೆ ಯತ್ನಿಸಿ ಟ್ರೈನ್ ಅಡಿ ಅವಿತು ಕುಳಿತಿದ್ದ. ನಂತರ ಬಾಲಕನಿಗೆ ಸಿಬ್ಬಂದಿ ಬುದ್ದಿ ಹೇಳಿ ಪೋಷಕರಿಗೆ ಒಪ್ಪಿಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم