ಬೆಂಗಳೂರು: ಬಿರಿಯಾನಿ ತಿನ್ನಲೆಂದು ಹೋದ ಈ ಆಟೋಚಾಲಕ 2 ಲಕ್ಷ ರೂಪಾಯಿ ಕಳೆದುಕೊಳ್ಳುವಂತಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಇಂತಹದ್ದೊಂದು ಘಟನೆ ನಡೆಯಿತು.
ಹನುಮಂತರಾಯ ಎಂಬ ಎಂಬ ಆಟೋಚಾಲಕ ಹಣ ಕಳೆದುಕೊಂಡಿದ್ದು, ಸಾಲ ತೀರಿಸಲು ಚಿನ್ನವನ್ನು ಅಡವಿಟ್ಟಿದ್ದ ,ಬ್ಯಾಂಕ್ವೊಂದರಲ್ಲಿ ಚಿನ್ನ ಅಡವಿಟ್ಟು 2 ಲಕ್ಷ ರೂಪಾಯಿ ಸಾಲ ಪಡೆದಿದ್ದ ಈ ಚಾಲಕ, ಆ ಹಣ ಹಿಡಿದುಕೊಂಡು ಬರುತ್ತಿದ್ದಾಗ ಬಿರಿಯಾನಿ ತಿನ್ನಲು ಹೋಗಿದ್ದ.
ಹಣ ಬೈಕ್ನಲ್ಲಿನ ಸೈಡ್ ಲಾಕರ್ನಲ್ಲಿಟ್ಟುಕೊಂಡು ಬಾಮೈದನ ಜೊತೆಗೆ ಬರುತ್ತಿದ್ದ ಹನುಮಂತರಾಯ, ಮಾರ್ಗಮಧ್ಯೆ ಬಿರಿಯಾನಿ ತಿನ್ನಲು ದ್ವಿಚಕ್ರವಾಹನ ನಿಲ್ಲಿಸಿದ್ದಾನೆ.
ಈತನ ಬೈಕ್ ಬಳಿ ಸುಳಿದಾಡುತ್ತಿದ್ದ ಕಳ್ಳರು ಆ ಹಣವನ್ನು ಕದ್ದು ಇನ್ನೊಂದು ಬೈಕ್ನಲ್ಲಿ ಪರಾರಿ ಆಗಿರುವುದು ಸಿಸಿಟಿವಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ.
ಆರೋಪಿಗಳ ಪತ್ತೆಗಾಗಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
إرسال تعليق