ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಳ್ವಾಸ್‍ನಲ್ಲಿ ಮೂರು ದಿನದ ಅಂತರಾಷ್ಟ್ರೀಯ ವೆಬಿನಾರ್

ಆಳ್ವಾಸ್‍ನಲ್ಲಿ ಮೂರು ದಿನದ ಅಂತರಾಷ್ಟ್ರೀಯ ವೆಬಿನಾರ್


ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ಜೈವಿಕ ಸಂಶೋಧನಾ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದ ಮೂರು ದಿನದ ವೆಬಿನಾರ್ ನಡೆಯಿತು.


ವೆಬಿನಾರ್ ನ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ವಹಿಸಿದ್ದರು.  ಸಂಪನ್ಮೂಲ ವ್ಯಕ್ತಿಗಳಾಗಿ, ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕಿ ಡಾ. ರೇಷ್ಮಾ ಶೆಟ್ಟಿ, ಭೋಪಾಲ್ ಐಐಎಸ್ ಇಆರ್ ನ ಸಹಾಯಕ ಪ್ರಾಧ್ಯಾಪಕಿ ಡಾ. ವಿನಿತ ಗೌಡ, ಆಳ್ವಾಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಬೆಂಗಳೂರಿನ ಸಿಂಜಿನ್ ಇಂಟರ್ನ್ಯಾಷನಲ್ ಲಿಮಿಟೆಡ್, ಬಯೋಕಾನ್ ಪಾರ್ಕ್ ನ ರಿಸರ್ಚ್ ಅಸೋಸಿಯೇಟ್ ಮನೀಶ್ ಕೆ. ಎಸ್, ಜಪಾನ್‌ನ ಯುನಿವರ್ಸಿಟಿ ಆಫ್ ಎನ್ವಿರೋನ್ಮೆಂಟಲ್ ಹಾಗೂ ಆಕ್ಯುಪೇಶನಲ್ ಹೆಲ್ತ್ ನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಮಹೇಶ್ ಪ್ರಸಾದ್ ಬೇಕಲ್, ಕುವೈತ್ ನ ದಾಸ್ ಮನ್ ಡಯಾಬಿಟಿಸ್ ಇನ್ಸ್ಟಿಟ್ಯೂಟ್ ನ ರಿಸರ್ಚ್ ಅಸೋಸಿಯೇಟ್ ಪ್ರಶಾಂತ್‍ಹೆಬ್ಬಾರ್ ಕೆ ವಿದ್ಯಾರ್ಥಿಗಳಿಗೆ ಜೈವಿಕ ವಿಜ್ಞಾನ ಸಂಶೋಧನೆಗೆ ಅಗತ್ಯವಿರುವ ಮಾಹಿತಿ ಹಾಗೂ ವಿವಿಧ ಸಂಶೋಧನಾ ವಿಷಯಗಳ ಕುರಿತು ತಿಳಿಸಿದರು.

 

ವೆಬಿನಾರ್ ನ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಯುಷ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ಸುರೇಖಾ ಪೈ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಜ್ಞಾನ ವಿಭಾಗದ ಡೀನ್ ರಮ್ಯಾ ರೈ ಪಿ. ಡಿ, ಉಪನ್ಯಾಸಕರಾದ  ಉಷಾ ಬಿ, ರಮ್ಯಾ ರೈ ಎಂ., ಚಂದ್ರಕಲಾ ಎಸ್., ಶ್ವೇತಾ ಡಿ. ಶೆಟ್ಟಿ, ಉಪಸ್ಥಿತರಿದ್ದರು. ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ ಆಳ್ವಾಸ್ ಜೈವಿಕ ವಿಜ್ಞಾನದ 388 ವಿದ್ಯಾರ್ಥಿಗಳು ವೆಬಿನಾರ್ ನ ಪ್ರಯೋಜನ ಪಡೆದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم