ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಾನುವಾರು ಅಕ್ರಮ ಸಾಗಾಟ; ಮೂವರ ಬಂಧನ

ಜಾನುವಾರು ಅಕ್ರಮ ಸಾಗಾಟ; ಮೂವರ ಬಂಧನ

 


ಕಾರ್ಕಳ : ಕೌಡೂರು ಗ್ರಾಮದ ಪಳ್ಳಿಕ್ರಾಸ್‌ ಬಳಿ ವಾಹನದಲ್ಲಿ ಜಾನುವಾರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ವಾಹನ ಹಾಗೂ ಎರಡು ಗಂಡು ಕರುಗಳನ್ನು ನಗರ ಠಾಣೆಯ ಪೊಲೀಸರು ಭಾನುವಾರ ಬೆಳಿಗ್ಗೆ ವಶಪಡಿಸಿಕೊಂಡಿದ್ದಾರೆ.


ರಂಗನಪಲ್ಕೆ ಕಡೆಯಿಂದ ಬರುತ್ತಿದ್ದ ಪಿಕಪ್‌ ಗೂಡ್ಸ್‌ ವಾಹನವನ್ನು ತಡೆದು ನಿಲ್ಲಿಸಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.


ವಾಹನದಲ್ಲಿ ಹಿಂಸಾತ್ಮಾಕ ರೀತಿಯಲ್ಲಿ ಎರಡು ಗಂಡು ಕರುಗಳ ಕಾಲಿಗೆ ಹಗ್ಗವನ್ನು ಕಟ್ಟಿ ತುಂಬಿಸಿಕೊಂಡು ಹೋಗುತ್ತಿದ್ದರು. 


ವಾಹನದಲ್ಲಿದ್ದ ಆರೋಪಿಗಳನ್ನು ವಿಚಾರಿಸಿದ ವೇಳೆ ಕೌಡೂರು ಗ್ರಾಮದ ಮಾಣಿಕು ಮೇರಿಯ ಹಟ್ಟಿಯಲ್ಲಿದ್ದ ಗಂಡು ಕರುವನ್ನು ಮೂವರು ಸೇರಿ ಕಳವು ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.


ಪಿಕಪ್‌ ವಾಹನದ ಚಾಲಕ ರವೀಂದ್ರ, ಪಿಕಪ್‌ ವಾಹನದಲ್ಲಿದ್ದ ಹಮೀದ್‌ ಸಾಹೇಬ್‌, ಮಹಾಬಲ ಪೂಜಾರಿ ಇವರನ್ನು ಬಂಧಿಸಲಾಗಿದೆ. 


ಮೂವರು ಆರೋಪಿಗಳ ವಿರುದ್ದ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ

0 تعليقات

إرسال تعليق

Post a Comment (0)

أحدث أقدم