ಪೆರ್ಲ: ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಎಣ್ಮಕಜೆ ಪಂಚಾಯಿತಿನ ಆರು ಸ್ಥಳಗಳಲ್ಲಿ ಮಂಜೇಶ್ವರ ಶಾಸಕರ ಅಭಿವೃದ್ಧಿ ನಿಧಿಯಿಂದ ಮಂಜೂರುಗೊಂಡ ಹೈಮಾಸ್ಟ್ ಲೈಟ್ ಸ್ಥಾಪಿಸಿ ಉದ್ಘಾಟಿಸಲಾಯಿತು.
ಪಂಚಾಯಿತಿನ ಸ್ವರ್ಗ ಜಂಕ್ಷನ್, ಚವರ್ಕಾಡ್, ಬೆದ್ರಂಪಳ್ಳ, ಮಲಂಗರೆ, ಗುಣಾಜೆಗಳಲ್ಲಿ ಸ್ಥಾಪಿಸಿದ ಮಿನಿ ಮಾಸ್ಟ್ ಲೈಟ್ ನ್ನು ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿದರು.
ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ರಾಧಾಕೃಷ್ಣ ನಾಯಕ್, ಝರೀನಾ ಮುಸ್ತಾಫ, ಎಣ್ಮಕಜೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ, ಆಯಿಷಾ ಎ.ಎ., ಸಿದ್ದಿಕ್ ವಳಮೊಗರು, ಸ್ವರ್ಗ ವಾರ್ಡ್ ರಾಮಚಂದ್ರ ಎಂ., ಮಾಜಿ ಸದಸ್ಯೆ ಚಂದ್ರಾವತಿ ಎಂ.ವಾಣೀನಗರ ವಾರ್ಡ್ ಸದಸ್ಯ ನರಸಿಂಹ ಪೂಜಾರಿ, ಚವರ್ಕಾಡು ವಾರ್ಡು ಸದಸ್ಯೆ ಜಯಶ್ರೀ ಎ.ಕುಲಾಲ್, ಐತ್ತಪ್ಪ ಕುಲಾಲ್ ಹಾಗೂ ವಿವಿಧೆಡೆಯ ರಾಜಕೀಯ, ಸಾಮಾಜಿಕ ಮುಂದಾಳುಗಳು ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق