ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಳ್ವಾಸ್: ರಾಷ್ಟ್ರೀಯ ಮಟ್ಟದ ನಾಲೆಜ್ ಕ್ವಿಝ್ ಸ್ಪರ್ಧೆ ಫಲಿತಾಂಶ

ಆಳ್ವಾಸ್: ರಾಷ್ಟ್ರೀಯ ಮಟ್ಟದ ನಾಲೆಜ್ ಕ್ವಿಝ್ ಸ್ಪರ್ಧೆ ಫಲಿತಾಂಶ


ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎಂ.ಕಾಮ್ ಜನರಲ್ ಹಾಗೂ ಐಬಿಎಮ್ ವಿಭಾಗದ ವತಿಯಿಂದ ತೃತೀಯ ವರ್ಷದ ಬಿ.ಕಾಂ. ಹಾಗೂ ಬಿಬಿಎ ವಿದ್ಯಾರ್ಥಿಗಳಿಗಾಗಿ ನಡೆದ ರಾಷ್ಟ್ರೀಯ ಮಟ್ಟದ ನಾಲೆಜ್ ಕ್ವಿಝ್ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ಭರತ್ ಗಜಾನನ ಹೆಗ್ಡೆ ಪ್ರಥಮ ಬಹುಮಾನ ಪಡೆದಿದ್ದಾರೆ, ದ್ವಿತೀಯ ಸ್ಥಾನವನ್ನು ಮಣಿಪಾಲದ ಉಡುಪಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಟೂರಿಸಮ್ ಸಯನ್ಸ್ ಸುಮುಖ ಕೆ, ತೃತೀಯ ಸ್ಥಾನವನ್ನು ಆಳ್ವಾಸ್ ಕಾಲೇಜಿನ ಸೌಜನ್ಯ ಜೈನ್ ಪಡೆದಿದ್ದಾರೆ.  


ಕ್ವಿಝ್ ಸ್ಪರ್ಧೆಗೆ ವಿವಿಧ ಕಾಲೇಜುಗಳ 250 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗ ಸಂಯೋಜಕಿ ರೇಖಾ ಶೆಟ್ಟಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. 

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم