ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಸ್ಕಾರ ಸಹಿತ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕಬೇಕು: ಜಗನ್ನಿವಾಸ ರಾವ್

ಸಂಸ್ಕಾರ ಸಹಿತ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕಬೇಕು: ಜಗನ್ನಿವಾಸ ರಾವ್

ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲ್ಲಿ ಪ್ರಬೋಧನ ಶಿಬಿರ ಉದ್ಘಾಟನೆ



ಪುತ್ತೂರು: ಸಂಸ್ಕಾರ ಭಾರತೀಯ ವ್ಯವಸ್ಥೆಯ ತಳಹದಿ. ಆದ್ದರಿಂದ ಸಂಸ್ಕಾರರಹಿತವಾದ ಶಿಕ್ಷಣಕ್ಕೆ ಅರ್ಥವಿಲ್ಲ. ಹಿಂದೂ ಸಂಸ್ಕøತಿ ಸಹಿತವಾದ ಶಿಕ್ಷಣವನ್ನು ಮಕ್ಕಳಿಗೆ ಕೊಟ್ಟಾಗ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಸಬೇಕಾಗಿದೆ. ತನ್ಮೂಲಕ ಸಂಸ್ಕೃತಿಸಹಿತ ಉತ್ಕೃಷ್ಟ ಪರಿಸರವನ್ನು ನಿರ್ಮಾಣ ಮಾಡಬೇಕು ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪಿ.ಜೆ.ಜಗನ್ನಿವಾಸ ರಾವ್ ಹೇಳಿದರು.


ಅವರು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಪ್ರಬೋಧನ ಶಿಬಿರವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.  


ವಿದ್ಯಾರ್ಥಿಗಳು ಇಂದು ತರಗತಿಯಲ್ಲಿ ಕೇವಲ ಪಠ್ಯ ಸಂಗತಿಗಳನ್ನಷ್ಟೇ ಕಲಿತರೆ ಸಾಲದು. ಬದಲಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದಾದ ಸಮಗ್ರ ಶಿಕ್ಷಣವನ್ನು ಪಡೆದುಕೊಳ್ಳಬೇಕಿದೆ. ಅಂತೆಯೇ ನಮ್ಮಲ್ಲಿ ಕೌಶಲ್ಯಗಳನ್ನು ಮೂಡಿಸುವಂತಹ ಶಿಕ್ಷಣದ ಅಗತ್ಯವಿದೆ. ಆತ್ಮನಿರ್ಭರ ಭಾರತದ ಕಲ್ಪನೆಯೂ ಈ ಹಿನ್ನೆಲೆಯಲ್ಲೇ ಮೂಡಿಬಂದಿದೆ. ವಿದ್ಯಾರ್ಥಿಗಳು ಕುಶಲತೆಗಳನ್ನು ಒಡಮೂಡಿಸಿಕೊಳ್ಳುವುದರ ಮೂಲಕ ಭವಿಷ್ಯದಲ್ಲಿ ಭಾರತದಲ್ಲೇ ಉದ್ಯೋಗವನ್ನು ಕಂಡುಕೊಂಡು ಕಾರ್ಯನಿರ್ವಹಿಸುವಂತಾಗಬೇಕು ಎಮದು ನುಡಿದರು.


ಪ್ರಸ್ತಾವನೆಗೈದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ಶಿಕ್ಷಣ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು. ಕಲೆತು ಕಲಿಯುವ ಮತ್ತು ಕಲಿತು ಕಲೆಯುವ ಗುಣವನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು. ಇಂದು ವಿದ್ಯಾಥಿಗಳಿಗೆ ಕಲಿಕೆಯ ಅವಕಾಶಗಳು ತುಂಬ ವಿಸ್ತೃತವಾಗಿವೆ. ಆ ನೆಲೆಯಲ್ಲಿ ತುಂಬ ಜವಾಬ್ದಾರಿಯಿಂದ ಮುಂದುವರೆಯಬೇಕು. ಶಿಕ್ಷಣ ವ್ಯವಸ್ಥೆಯ ಮೇಲೆ ಕೊರೋನಾ ಅಪಾರ ಹಾನಿ ಮಾಡಿದೆ. ಆದ್ದರಿಂದಲೇ ಅನೇಕ ಸಂಗತಿಗಳನ್ನು ವಿದ್ಯಾಥಿಗಳು ಕಳೆದುಕೊಳ್ಳುವಂತಾಗಿದೆ. ಇನ್ನು ದೊರಕುವ ಸಮಯದಲ್ಲಾದರೂ ಅತ್ಯಂತ ಹೆಚ್ಚು ಕಲಿಯುವ ಬಗೆಗೆ ಕಾರ್ಯತತ್ಪರರಾಗಬೇಕಿದೆ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲಿ ದೊರಕುವ ಎಲ್ಲ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ ಕಲಿಯುವಲ್ಲಿ ಮುಂದುವರೆಯಬೇಕು. ಯಾವುದೇ ಶಿಕ್ಷಣ ಸಂಸ್ಥೆಗೆ ಬರಿದಾಗಿರುವ ಕೊಡಗಳಂತೆ ಆಗಮಿಸುವ ವಿದ್ಯಾರ್ಥಿಗಳು ಸಂಸ್ಥೆಯಿಂದ ತೆರಳುವಾಗ ತುಂಬಿದ ಕೊಡಗಳಾಗಿ ಹೋಗುವಂತಾಗಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ, ಕೊರೋನಾ ಕಾರಣದಿಂದಲಾಗಿ ಪರೀಕ್ಷೆ ಹಾಗೂ ಜ್ಞಾನ ಇಲ್ಲದೆಯೇ ಪದವಿ ದೊರಕುವಂತಾಗಿದೆ. ಆದರೆ ಹಾಗೆ ಪಡೆಯುವ ಪದವಿಯಿಂದ ಯಾವ ಪ್ರಯೋಜನವೂ ಇಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಹೆಚ್ಚು ಹೆಚ್ಚು ಕಲಿಯುವ ಪ್ರಯತ್ನವನ್ನು ಮಾಡಬೇಕು ಎಂದರಲ್ಲದೆ ಜ್ಞಾನ ಹಾಗೂ ಬುದ್ಧಿವಂತಿಕೆಯ ನಡುವೆ ಅಪಾರ ವ್ಯತ್ಯಾಸಗಳಿವೆ. ಜ್ಞಾನ ಎಲ್ಲೆಡೆಯೂ ದೊರಕುವಂತಹದ್ದಾದರೆ ಬುದ್ಧಿವಂತಿಕೆ ಎನ್ನುವುದು ಆ ಜ್ಞಾನವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಅಡಗಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಅಕ್ಷಯ್ ಹೆಗಡೆ, ಕನ್ನಡ ಉಪನ್ಯಾಸಕಿಯರಾದ ಪುಷ್ಪಲತಾ ಹಾಗೂ ಜಯಂತಿ ಉಪಸ್ಥಿತರಿದ್ದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post