ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೂರು-ದುಮ್ಮಾನ: ಅರ್ಧ ಲೀಟರ್‌ ಬಿಸ್ಲೆರಿ ನೀರಿಗೆ 3 ರೂ ಹೆಚ್ಚುವರಿ ವಸೂಲಿ ಮಾಡುತ್ತಿರುವ ಹಾಸನ ಬಸ್ ನಿಲ್ದಾಣದ ವ್ಯಾಪಾರಿಗಳು

ದೂರು-ದುಮ್ಮಾನ: ಅರ್ಧ ಲೀಟರ್‌ ಬಿಸ್ಲೆರಿ ನೀರಿಗೆ 3 ರೂ ಹೆಚ್ಚುವರಿ ವಸೂಲಿ ಮಾಡುತ್ತಿರುವ ಹಾಸನ ಬಸ್ ನಿಲ್ದಾಣದ ವ್ಯಾಪಾರಿಗಳು


ಕೋವಿಡ್-19 ಸಾಂಕ್ರಾಮಿಕದ ಕಾಲದಲ್ಲಿ ಪೆಟ್ರೋಲ್‌ ಬೆಲೆ ಶತಕ ದಾಟಿರುವುದು ಈಗ ಹಳೆಯದಾಯಿತು. ಆದರೆ ಕುಡಿಯುವ ನೀರಿನ ಬಾಟಲಿ ಬೆಲೆಯೂ ಈ ರೀತಿ ಏರುತ್ತಿದೆ ಎಂದರೆ ವ್ಯವಸ್ಥೆಯಲ್ಲಿ ಏನೋ ಎಡವಟ್ಟಾಗುತ್ತಿದೆ ಎಂದೇ ಅರ್ಥ.


ಹಾಸನದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ತಮಗಾದ ಅನುಭವವನ್ನು ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ.


ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ಹಾಸನ ಬಸ್‌ ನಿಲ್ದಾಣದೊಳಗೆ 10 ರೂ ಬೆಲೆಯ ಅರ್ಧ ಲೀಟರ್‌ ಬಿಸ್ಲೆರಿ ನೀರಿನ ಬಾಟಲಿಗೆ 3 ರೂ.ಗಳನ್ನು ಹೆಚ್ಚುವರಿಯಾಗಿ ಪಡೆದು ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.


ಬಾಟಲಿಯಲ್ಲಿ ಮುದ್ರಿತ ಬೆಲೆ 10 ರೂ.ಗಳಾಗಿದ್ದರೂ 13 ರೂ ಪಡೆಯುವ ಮೂಲಕ ಪ್ರಯಾಣಿಕರನ್ನು ಈ ವ್ಯಾಪಾರಿಗಳು ಹಿಂಡುತ್ತಿದ್ದಾರೆ ಎಂದು ದೂರುಗಳು ಕೇಳಿ ಬಂದಿವೆ. ಸಾಮಾನ್ಯ ದಿನಗಳಲ್ಲಿ ಸಾವಿರಾರು ಮಂದಿ ಪ್ರಯಾಣಿಕರು ಯಾತ್ರಿಕರು ಬಂದು ಹೋಗುವ ಈ ಬಸ್ ನಿಲ್ದಾಣದಲ್ಲಿ ಅನಿವಾರ್ಯವಾಗಿ ನೀರಿನ ಬಾಟಲಿ ಕೊಳ್ಳುವವರ ಸಂಖ್ಯೆ ಸಾಕಷ್ಟಿದೆ. ಅವರಿಂದ ಈ ರೀತಿ ಹೆಚ್ಚುವರಿಯಾಗಿ 3 ರೂ ಸುಲಿಗೆ ಮಾಡುವುದು ಯಾವ ನ್ಯಾಯ ಎಂಬುದು ನೊಂದವರೊಬ್ಬರ ಪ್ರಶ್ನೆ.


-ಶಿವನಾರಾಯಣ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم