ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವೇಣೂರಿನ ಬಾಹುಬಲಿ ಕ್ಷೇತ್ರದಲ್ಲಿ ಪುಣ್ಯನಂದಿ ಮುನಿಮಹಾರಾಜರಿಂದ ಕೇಶಲೋಚನ

ವೇಣೂರಿನ ಬಾಹುಬಲಿ ಕ್ಷೇತ್ರದಲ್ಲಿ ಪುಣ್ಯನಂದಿ ಮುನಿಮಹಾರಾಜರಿಂದ ಕೇಶಲೋಚನ


ಪೂಜ್ಯ ಪುಣ್ಯ ನಂದಿ ಮುನಿ ಮಹಾರಾಜರು ಮಂಗಳವಾರ ಕೇಶಲೋಚನ ಮಾಡಿಕೊಂಡರು.


ಉಜಿರೆ: ವೇಣೂರಿನಲ್ಲಿ ಬಾಹುಬಲಿ ಕ್ಷೇತ್ರದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಪೂಜ್ಯ ಪುಣ್ಯನಂದಿ ಮುನಿಮಹಾರಾಜರು ಮಂಗಳವಾರ ಕೇಶಲೋಚನ ಮಾಡಿಕೊಂಡರು.


ಜೈನ ಸಂಪ್ರದಾಯದಂತೆ ದಿಗಂಬರ ಮುನಿಗಳು ತಮ್ಮ ತಲೆ ಕೂದಲನ್ನು ಕೈಯಿಂದ ಕಿತ್ತು ತೆಗೆಯುವುದಕ್ಕೆ ಕೇಶಲೋಚನ ಎನ್ನುತ್ತಾರೆ. ಇದು ತ್ಯಾಗ, ವೈರಾಗ್ಯ ಮತ್ತು ಸಂಯಮದ ಸಂಕೇತವಾಗಿದೆ.


ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಮುನಿಗಳು ದೇವರ ದರ್ಶನ ಮಾಡಿ ಬಳಿಕ ಯಾತ್ರಿ ನಿವಾಸದಲ್ಲಿ ಕೇಶಲೋಚನ ಮಾಡಿಕೊಂಡರು.


ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಮಾರಗುತ್ತು ವಿಜಯರಾಜ ಅಧಿಕಾರಿ ಮತ್ತು ಸ್ಥಳೀಯ ಶ್ರಾವಕರು ಉಪಸ್ಥಿತರಿದ್ದು ಪಂಚ ನಮಸ್ಕಾರ ಮಂತ್ರ ಪಠಣ ಮಾಡಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post