ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾರಾವಿ ಬಸದಿಯಲ್ಲಿ ಅನಂತ ನೋಂಪಿ

ನಾರಾವಿ ಬಸದಿಯಲ್ಲಿ ಅನಂತ ನೋಂಪಿ


ನಾರಾವಿ ಬಸದಿಯಲ್ಲಿ 15 ಮಂದಿ ಶ್ರಾವಕ-ಶ್ರಾವಕಿಯರು ಅನಂತ ನೋಂಪಿ ಆಚರಿಸಿದರು.


ಉಜಿರೆ: ನಾರಾವಿ ಬಸದಿಯಲ್ಲಿ ಭಗವಾನ್ ಶ್ರೀ ಅನಂತನಾಥ ಸ್ವಾಮಿಯ ಸನ್ನಿಧಿಯಲ್ಲಿ 15 ಮಂದಿ ಶ್ರಾವಕ-ಶ್ರಾವಕಿಯರು ಅನಂತ ನೋಂಪಿ ಆಚರಿಸಿದರು.


ಬಸದಿಯ ಪ್ರಧಾನ ಪುರೋಹಿತರಾದ ಹರ್ಷಿತ್ ಇಂದ್ರರ ನೇತೃತ್ವದಲ್ಲಿ ನಡೆದ ನೋಂಪಿಯಲ್ಲಿ ಜಯಶ್ರೀ ಹೊರನಾಡು ಮತ್ತು ಬಳಗದವರು ಹಾಡಿದ ಸುಶ್ರಾವ್ಯ ಜಿನಭಕ್ತಿಗೀತೆಗಳು ನೋಂಪಿಗೆ ಹೆಚ್ಚಿನ ಶೋಭೆಯನ್ನು ನೀಡಿದವು.


ಬಸದಿಯಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಚಿಂತನಮತಿ ಮಾತಾಜಿ ಮತ್ತು ಕ್ಷುಲ್ಲಿಕಾ ಸುಶ್ರೇಯಾಮತಿ ಮಾತಾಜಿ ಆಶೀರ್ವಚನ ನೀಡಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post