ಮೂಡುಬಿದಿರೆ: ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಅಂಗವಾಗಿ ಆಳ್ವಾಸ್ ಸ್ನಾತಕೋತ್ತರ ಫುಡ್ ಸಯನ್ಸ್ ವಿಭಾಗದ ವತಿಯಿಂದ ಎರಡು ದಿನದ ವೆಬಿನಾರ್ ಅಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಬಾಗಲಕೋಟೆಯ ಯುನಿವರ್ಸಿಟಿ ಆಫ್ ಹಾರ್ಟಿಕಲ್ಚರಲ್ ಸಯನ್ಸ್ ಪೋಸ್ಟ್ ಹಾರ್ವೆಸ್ಟ್ ಟೆಕ್ನಾಲಜಿಯ ಮುಖ್ಯಸ್ಥೆ ಡಾ. ಭುವನೇಶ್ವರಿ ಜಿ ಹಾಗೂ ಕೊಯಂಬುತ್ತೂರ್‍ನ ಅರ್‍ವಿಎಸ್ ಕಾಲೇಜಿನ ರಿಸರ್ಚ್ ಹೆಡ್ ಆಗಿರುವ ಡಾ. ಮೀರಾ ರಮಣ್ ಭಾಗವಹಿಸಿದ್ದರು. ವೆಬಿನಾರ್‍ನಲ್ಲಿ ಪೌಷ್ಟಿಕ ಆಹಾರದ ಮಹತ್ವ, ಶಿಶು ಮತ್ತು ಮಕ್ಕಳ ಆರೈಕೆಯಲ್ಲಿ ಪೌಷ್ಟಿಕಾಂಶಗಳ ಅಗತ್ಯತೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಪ್ರಾಂಶುಪಾಲ ಡಾ. ಕುರಿಯನ್, ವಿಭಾಗ ಮುಖ್ಯಸ್ಥೆ ಡಾ. ಅರ್ಚನಾ ಪ್ರಭಾತ್ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸ್ವಾತಿ ಹಾಗೂ ದಿವ್ಯ ವಂದಿಸಿದರು, ಶಿವಾನಿ ಶೆಟ್ಟಿ ಹಾಗೂ ನವ್ಯ ಕಾರ್ಯಕ್ರಮ ನಿರೂಪಿಸಿದರು. ಫುಡ್ ಸಯನ್ಸ್ ವಿಭಾಗದ ವಿದ್ಯಾರ್ಥಿಗಳು ವೆಬಿನಾರ್‍ನ ಪ್ರಯೋಜನ ಪಡೆದುಕೊಂಡರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق