ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕ್ಯಾಂಟರ್ ಲಾರಿಗೆ ರೈಲು ಡಿಕ್ಕಿ; ಲಾರಿ ಸಂಪೂರ್ಣ ಜಖಂ

ಕ್ಯಾಂಟರ್ ಲಾರಿಗೆ ರೈಲು ಡಿಕ್ಕಿ; ಲಾರಿ ಸಂಪೂರ್ಣ ಜಖಂ

 


ಬೆಂಗಳೂರು: ಕ್ಯಾಂಟರ್ ಲಾರಿಗೆ ರೈಲು ಡಿಕ್ಕಿ ಹೊಡೆದ ಘಟನೆಯೊಂದು ನಗರದ ಹುಸ್ಕೂರು ಬಳಿ ನಡೆದಿದೆ.


ನಿನ್ನೆ ರಾತ್ರಿಯ ವೇಳೆ 11 ಗಂಟೆಗೆ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ರೈಲು ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್​ ಲಾರಿಯು ಮೂರ್ನಾಲ್ಕು ಭಾಗವಾಗಿ ಸಂಪೂರ್ಣ ಜಖಂಗೊಂಡಿದೆ.


ಜೊತೆಗೆ ರೈಲಿನ ಇಂಜಿನ್​ ಕೂಡ ಜಖಂಗೊಂಡಿದೆ. ಹುಸ್ಕೂರು ರೈಲು ಹಳಿಯ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ.  


ಈ ವೇಳೆ ರೈಲ್ವೇ ಹಳಿಯ ಮೇಲೆ ಕ್ಯಾಂಟರ್ ಲಾರಿ ಸಾಗುತ್ತಿದ್ದಾಗ ವೇಗವಾಗಿ ಬಂದ ಮೈಸೂರು-ಚೆನ್ನೈ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.


ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಹಾಗೂ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.



0 تعليقات

إرسال تعليق

Post a Comment (0)

أحدث أقدم