ಮಂಗಳೂರು: ನಿಫಾ ಸೋಂಕಿನ ಶಂಕೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಗೋವಾದಲ್ಲಿ ಆರ್ಟಿ-ಪಿಸಿಆರ್ ಕಿಟ್ ತಯಾರಿಸುವ ಪ್ರಯೋಗಾಲಯದಲ್ಲಿ ಮೈಕ್ರೊ ಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿರುವ ಈ ವ್ಯಕ್ತಿ, ಕಾರವಾರದಲ್ಲಿರುವ ಮನೆಗೆ ಬೈಕ್ ನಲ್ಲಿ ಬರುವಾಗ ಮಳೆಯಲ್ಲಿ ನೆನೆದುಕೊಂಡು ಬಂದಿದ್ದರು.
ಎರಡು ದಿನಗಳ ಹಿಂದೆ ಅವರಿಗೆ ಜ್ವರ ಬಂದಿತ್ತು. ಜ್ವರದ ಲಕ್ಷಣಗಳನ್ನು ಆಧರಿಸಿ, ನಿಫಾ ಎಂದು ಶಂಕಿಸಿ ಆಸ್ಪತ್ರೆ ಗೆ ದಾಖಲಾಗಿದ್ದರು.
ಅವರ ಗಂಟಲು ದ್ರವ, ರಕ್ತ ಮತ್ತು ಮೂತ್ರ ಮಾದರಿಯನ್ನು ಸಂಗ್ರಹಿಸಿ, ಪುಣೆಯ ಪ್ರಯೋಗಾಲಯಕ್ಕೆ ತಪಾಸಣೆಗಾಗಿ ಕಳುಹಿಸಲಾಗಿತ್ತು. ಇದೀಗ ವರದಿ ನೆಗೆಟಿವ್ ಬಂದಿದೆ.
إرسال تعليق