ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಂಡೆ ಮೇಲೆ ಧ್ಯಾನದಲ್ಲಿ ಕುಳಿತಂತೆ ಫೋಟೋ ಗೆ ಫೋಸ್ ಕೊಟ್ಟ ವ್ಯಕ್ತಿ ನೀರು ಪಾಲು

ಬಂಡೆ ಮೇಲೆ ಧ್ಯಾನದಲ್ಲಿ ಕುಳಿತಂತೆ ಫೋಟೋ ಗೆ ಫೋಸ್ ಕೊಟ್ಟ ವ್ಯಕ್ತಿ ನೀರು ಪಾಲು

 



ಉತ್ತರ ಕನ್ನಡ : ಸಮುದ್ರದ ದಡದ ಬಂಡೆ ಮೇಲೆ ಧ್ಯಾನದಲ್ಲಿ ಕುಳಿತಂತೆ ಫೋಟೋಗೆ ಪೋಸ್ ಕೊಡಲು ಹೋಗಿ ಪ್ರವಾಸಿಗನೊಬ್ಬ ಬಲಿಯಾಗಿರುವ ಘಟನೆ ಕುಮಟಾದ ವನ್ನಳ್ಳಿ ಕಡಲತೀರದಲ್ಲಿ ನಡೆದಿದೆ.


ಶಿರಸಿ ನಗರದ ನಿವಾಸಿ 42 ವರ್ಷದ ಸುಬ್ಬುಗೌಡ ಮೃತ ಪ್ರವಾಸಿಗ.


ಸ್ನೇಹಿತರ ಜೊತೆಗೆ ಪ್ರವಾಸದಲ್ಲಿ ಬಂದಿದ್ದ ಸುಬ್ಬುಗೌಡ, ಕಡಲತೀರದ ಬಂಡೆ ಮೇಲೆ ಕುಳಿತು ಫೋಟೋಗೆ ಪೋಸ್ ಕೊಡುತ್ತಿದ್ದ ಈ ವೇಳೆ ಅಪ್ಪಳಿಸಿದ ಬೃಹತ್ ಗಾತ್ರದ ಅಲೆಯಿಂದ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 


ಈ ಘಟನೆ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments

Post a Comment

Post a Comment (0)

Previous Post Next Post