ಧಾರವಾಡ: ಮಹಿಳೆಯ ಜೊತೆಗೆ ಮಾಜಿ ಕಾರ್ಪೋರೆಟರ್ ಅಸಭ್ಯವಾಗಿ ವರ್ತಿಸಿ, ಜೀವ ಬೆದರಿಕೆ ಹಾಕಿದ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ.
ನಗರದ ಸತ್ತೂರ ಡೆಂಟಲ್ ಕಾಲೇಜು ಬಳಿ ಧಾರವಾಡದ ಮೂರನೇ ವಾರ್ಡ್ ನ ಮಾಜಿ ಕಾರ್ಪೋರೆಟರ್, ಜೆಡಿಎಸ್ ಮುಖಂಡ ಶ್ರೀಕಾಂತ್ ಜಮನಾಳ, ಮಹಿಳೆಯನ್ನು ನಡುರಸ್ತೆಯಲ್ಲಿಯೇ ಕೈ ಹಿಡಿದು ಎಳೆದಾಡಿ ಗಲಾಟೆ ಮಾಡಿದ್ದಾನೆ.
ಈ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ಜಮನಾಳ, ಆಕೆಯೊಂದಿಗೆ ಹಣದ ವ್ಯವಹಾರ ಇಟ್ಟುಕೊಂಡಿದ್ದ ಎನ್ನಲಾಗಿದ್ದು, ಆಕೆಯನ್ನು ಅನೈತಿಕ ಚಟುವಟಿಕೆಗೆ ಬಳಸಿಕೊಳ್ಳಲು ಒತ್ತಾಯ ಮಾಡಿದ್ದಾನೆ.
ಅಷ್ಟು ಮಾತ್ರವಲ್ಲದೆ ಮಹಿಳೆಯ ಮನೆಗೆ ಹೋದಾಗ ಬಾಗಿಲು ತೆರೆಯದೇ ಹಿಂದೇಟು ಹಾಕಿದ್ದಾಳೆ. ಮಹಿಳೆ ಬಾಗಿಲು ತೆರೆಯದ್ದಕ್ಕೆ ಕೋಪಗೊಂಡ ಜಮನಾಳ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೇ, ಮಹಿಳೆಯ ಮೇಲೆ ಹಲ್ಲೆಗೈದಿದ್ದಾನೆ ಎಂದು ಆರೋಪ ಕೇಳಿಬಂದಿದೆ.
ಈ ಹಿನ್ನೆಲೆ ಮಹಿಳೆ ಆತಂಕಗೊಂಡಿದ್ದು ಜಮನಾಳ ವಿರುದ್ಧ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
إرسال تعليق