ಕಲಬುರ್ಗಿ : ತಾಯಿ ಮತ್ತು ನವಜಾತ ಶಿಶು ಮೃತಪಟ್ಟಿರುವ ಘಟನೆಯೊಂದು ಕಲಬುರ್ಗಿ ಯ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.
ಕಲಬುರ್ಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿ ಕನ್ಯಾಕುಮಾರಿ (23 ವರ್ಷ) ಕಳೆದ ರಾತ್ರಿ ಹೆರಿಗೆ ನೋವು ಪ್ರಾರಂಭವಾಗಿತ್ತು.
ರಾತ್ರಿ 9 ಗಂಟೆಗೆ ಜಿಮ್ಸ್ ಆಸ್ಪತ್ರೆಗೆ ಕುಟುಂಬಸ್ಥರು ಕರೆದುಕೊಂಡು ಬಂದಿದ್ದರು.
ರಾತ್ರಿ ಒಂದು ಗಂಟೆ ಸಮಯದಲ್ಲಿ ಹೆರಿಗೆ ನಡೆದಿದ್ದು, ಅದೇ ಸಮಯದಲ್ಲಿ ಮಗು ಮೃತಪಟ್ಟಿದೆ. ಹೆರಿಗೆ ನಂತರ ಅರ್ಧ ಗಂಟೆಯಲ್ಲಿ ತಾಯಿ ಕೂಡ ಸಾವಿಗೀಡಾಗಿದ್ದಾರೆ.
ಹೆರಿಗೆ ನಂತರ ಕನ್ಯಾಕುಮಾರಿ ಅವರು ಹೊಟ್ಟೆ ನೋವು ಎಂದಿದ್ದರು. ಈ ವೇಳೆಯಲ್ಲಿ ನರ್ಸ್ಗಳು ಮಾತ್ರೆ ನೀಡಿದ್ದರಂತೆ. ಮಾತ್ರ ಸೇವಿಸಿದ್ದ ಬಳಿಕ ಕನ್ಯಾಕುಮಾರಿ, ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ.
ತಾಯಿ-ಮಗು ಸಾವಿಗೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ ವೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
Post a Comment