ಚಿಕ್ಕಬಳ್ಳಾಪುರ; ಟಾಟಾ ಏಸ್ ವಾಹನ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ನಿಶ್ಚಿತಾರ್ಥ ವಾಗಿದ್ದ ಮದುಮಗ ಹಾಗೂ ಆತನ ಸ್ನೇಹಿತ ಇಬ್ಬರು ಮೃತಪಟ್ಟ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಕಾರಕೂರು ಕ್ರಾಸ್ ಹಾಗೂ ಯಲ್ಲಂಪಲ್ಲಿ ಮಾರ್ಗ ಮಧ್ಯೆ ಸಂಭವಿಸಿದೆ.
ಬೈಕ್ ನಲ್ಲಿದ್ದ ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದ ಸ್ನೇಹಿತರಾದ ಜಬೀವುಲ್ಲಾ (22)ವರ್ಷ ಹಾಗೂ ಮಣಿಕಂಠ (21) ವರ್ಷ ಮೃತಪಟ್ಟಿದ್ದಾರೆ.
ಜಬೀವುಲ್ಲಾ ಇತ್ತೀಚೆಗಷ್ಟೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ತಯಾರಿ ನಡೆಸಿದ್ದ. ಆದರೆ ವಿಧಿಯ ಆಟ ಇಬ್ಬರು ಸ್ನೇಹಿತರನ್ನು ಬಲಿ ತೆಗೆದುಕೊಂಡಿದೆ. ಈ ಘಟನೆ ಬಗ್ಗೆ,ಸಬ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment