ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಅಪರಿಚಿತನಿಂದ ಲೈಂಗಿಕ ಕಿರುಕುಳ

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಅಪರಿಚಿತನಿಂದ ಲೈಂಗಿಕ ಕಿರುಕುಳ

 


ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಮುತ್ತು ಕೊಟ್ಟು ಅಪರಿಚಿತನೊಬ್ಬ ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ನಗರದ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿರುವ 21 ವರ್ಷದ ಯುವತಿ ದೂರು ನೀಡಿದ್ದಾರೆ.

ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ' ಎಂದು ಪೊಲೀಸ್ ಮೂಲಗಳು ಹೇಳಿವೆ.

'ಗಣಪತಿ ಹಬ್ಬಕ್ಕಾಗಿ ಯುವತಿ ಇತ್ತೀಚೆಗೆ ತನ್ನ ಊರಾದ ಬಳ್ಳಾರಿಗೆ ಹೋಗಿದ್ದರು. ಅಲ್ಲಿಂದ ವಾಪಸು ಬೆಂಗಳೂರಿಗೆ ಬರಲು ಸೆ. 12ರಂದು ರಾತ್ರಿ ಕೆಎಸ್‌ಆರ್‌ಟಿಸಿ (ಎಫ್‌ 834) ಬಸ್‌ ಹತ್ತಿದ್ದರು.  

ಈ ಸಂದರ್ಭದಲ್ಲಿ ಅಪರಿಚಿತ ಯುವಕ, ಬಸ್ ಹತ್ತಿ ಯುವತಿಯನ್ನು ದುರುಗುಟ್ಟಿ ನೋಡಿದ್ದ. ಅದಕ್ಕೆ ತಲೆಕೆಡಿಸಿಕೊಳ್ಳದ ಯುವತಿ, ತಮ್ಮ ಸೀಟ್ ನಲ್ಲಿ ಹೋಗಿ ಕುಳಿತಿದ್ದರು'

'ಮರುದಿನ ಬೆಳಿಗ್ಗೆ 5 ಗಂಟೆಗೆ ಬಸ್‌ ಬೆಂಗಳೂರು ತಲುಪುವಷ್ಟರಲ್ಲಿ ಯುವತಿ ನಿದ್ದೆಯಲ್ಲಿದ್ದರು. ದಾಸರಹಳ್ಳಿಯಿಂದ ಪೀಣ್ಯಕ್ಕೆ ಹೋಗುವ ಮಾರ್ಗಮಧ್ಯೆ ಯುವತಿಯ ಆಸನದ ಬಳಿ ಹೋಗಿದ್ದ ಆರೋಪಿ, ಕೆನ್ನೆಗೆ ಮುತ್ತು ಕೊಟ್ಟು ಲೈಂಗಿಕ ಕಿರುಕುಳ ನೀಡಿದ್ದ. 

ತಕ್ಷಣ ಎಚ್ಚರಗೊಂಡ ಯುವತಿ, ಆತನನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಆತ ಪೀಣ್ಯ ನಿಲ್ದಾಣದಲ್ಲಿ ಆರೋಪಿ ಇಳಿದು ಹೋಗಿದ್ದಾನೆ' ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

0 تعليقات

إرسال تعليق

Post a Comment (0)

أحدث أقدم