ಬಂಟ್ವಾಳ : ರಸ್ತೆ ದಾಟಲೆಂದು ಓಡಿ ಹೋದ ಬಾಲಕ ಕಾರಿನಡಿಗೆ ಬಿದ್ದು ಸದ್ಯ ಪಾರಾದ ಘಟನೆಯೊಂದು ಬಂಟ್ವಾಳದ ಇರಾ ಬಳಿ ನಡೆದಿದೆ. ಘಟನೆ ಬಗ್ಗೆ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ.
ಶಿವಾನಂದ್ ಎಂಬವರ ಪುತ್ರ ಮನೋಜ್ (12 ವರ್ಷ) ಗಾಯಾಳು ಬಾಲಕ.
ಆಟವಾಡಲೆಂದು ಮನೆಯಿಂದ ಹೊರ ಓಡಿಬಂದ ಬಾಲಕ ರಸ್ತೆ ದಾಟುವಾಗ ಒಂದೇ ಸಮನೇ ಓಡಿದ್ದಾನೆ.
ಈ ಸಮಯದಲ್ಲಿ ಬಂದ ಕಾರು ಆತನಿಗೆ ಡಿಕ್ಕಿ ಹೊಡೆದಿದೆ. ಕಾರಿನಡಿಗೆ ಬಾಲಕ ಬಿದ್ದು ಎಡಕಾಲು ಮುರಿತಕ್ಕೊಳಗಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
إرسال تعليق