ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಣೇಶ ಹಬ್ಬದ ಪ್ರಯುಕ್ತ ಸತ್ಯ ಶಾಂತ ಪ್ರತಿಷ್ಠಾನ ವತಿಯಿಂದ ಕವಿಗೋಷ್ಠಿ

ಗಣೇಶ ಹಬ್ಬದ ಪ್ರಯುಕ್ತ ಸತ್ಯ ಶಾಂತ ಪ್ರತಿಷ್ಠಾನ ವತಿಯಿಂದ ಕವಿಗೋಷ್ಠಿ

 



ಪುತ್ತೂರು: ಸತ್ಯಶಾಂತ ಪ್ರತಿಷ್ಠಾನ (ರಿ) ಇದರ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಸತ್ಯ ಶಾಂತ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆ ಶಾಂತಾ ಕುಂಟಿನಿಯವರು ಪ್ರಾಸ್ತಾವಿಕ ನುಡಿಗಳನ್ನು ಮಾತಾಡುತ್ತ ಸ್ವಾಗತ ಭಾಷಣ ಮಾಡಿದರು.


ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸುಳ್ಯದ ಖ್ಯಾತ ಸಾಹಿತಿಗಳು, ಜ್ಯೋತಿಷಿಗಳೂ ಚಲನಚಿತ್ರ ನಿರ್ದೇಶಕರೂ ಆಗಿರುವ ಮತ್ತು ಸುಳ್ಯದ ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ರವರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಾಹಿತ್ಯ ಸಮಾಜ ಬದಲಾವಣೆಗೆ ಬಲು ಸಹಕಾರಿ. ಉತ್ತಮ ಸಾಹಿತ್ಯ ಇತಿಹಾಸವಾಗಿ ಉಳಿಯುವುದು. ವಿದ್ಯಾರ್ಥಿಗಳು ಸಾಹಿತ್ಯದ ಕಡೆಗೆ ಹೆಚ್ಚು ಒಲವು ಬೆಳೆಸಿಕೊಂಡು ಸಾಹಿತ್ಯ ಲೋಕದಲ್ಲಿ ಬೆಳೆಯಬೇಕು ಬೆಳಗಬೇಕು. ಸತ್ಯ ಶಾಂತ ಪ್ರತಿಷ್ಠಾನದಿಂದ ಇನ್ನೂ ಇಂತಹ ಉತ್ತಮ ರೀತಿಯ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.


ಪತ್ರಕರ್ತ ಶ್ಯಾಮ್ ಸುದರ್ಶನ್ ಉಪಸ್ಥಿತರಿದ್ದರು. ಕವಿಗಳಾದ ಮಂಗಳೂರಿನ ಕಥಾಬಿಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಪಿ.ವಿ ಪ್ರದೀಪ್ ಕುಮಾರ್, ದಿಲೀಪ್ ವೇದಿಕ್ ಕಡಬ, ರಶ್ಮಿ ಸನಿಲ್, ಮಾನಸ ಪ್ರವೀಣ್ ಭಟ್ ರವರು ಕವನ ವಾಚನ ಮಾಡಿದರು. ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم