ದೇಶದ ಪ್ರಧಾನಿ ನರೇಂದ್ರ ದಾಮೇೂದರ್ ಮೇೂದಿಯವರಿಗೆ ನಿನ್ನೆ 71ರ ಹುಟ್ಟು ಹಬ್ಬ. ಮೇೂದಿಯವರು ಪ್ರಧಾನಿ ಪೀಠ ಸ್ವೀಕರಿಸಿ 7 ವರುಷಗಳು ತುಂಬಿದೆ. ಇನ್ನು ಇರುವ ಅವಧಿ ಕೇವಲ ಮೂರು ವರುಷ. ಹಾಗಾಗಿ ಇದೊಂದು ತುಂಬಾ ಅಥ೯ಪೂಣ೯ವಾದ ಸಂದರ್ಭ. ಈ ಏಳರ ಆಟ ಮೇೂದಿಯ ಜೀವನ ಪೂತಿ೯ ತುಂಬಾ ಮಹತ್ತರ ಸಂಖ್ಯೆ ಅನ್ನುವುದು ಮೇಲ್ನೋಟಕ್ಕೆ ಕಾಣುವ ಸಂಖ್ಯಾ ಭವಿಷ್ಯ.
ಇನ್ನು ಮುಂದಿನ ಚುನಾವಣೆ 2024ಕ್ಕೆ ಆವಾಗ ಮೇೂದಿಜಿಯವರಿಗೆ 74 ತುಂಬಿ ಬಿಡುತ್ತದೆ. ಬಿಜೆಪಿ ಪಕ್ಷದ ಪ್ರಾಯದ ಸಂಖ್ಯಾ ನಿಯಮದ ಪ್ರಕಾರ 75ರ ಅನಂತರ ರಾಜಕೀಯದಿಂದ ವಾನಪ್ರಸ್ಥದ ಕಡೆಗೆ ನಡೆಯುವ ಪ್ರಾಯ. ಇದಾಗಲೇ ಈ 75ರ ಗಡಿ ದಾಟಿದ ಬಿಜೆಪಿಯ ಪ್ರಮುಖ ನಾಯಕರಿಗೆ ವಾನಪ್ರಸ್ಥದ ಕಡೆ ದಾರಿ ತೇೂರಿಸಿದ ಪ್ರಾಯವೂ ಹೌದು. 2024ರ ಲೇೂಕಸಭಾ ಚುನಾವಣೆಯಲ್ಲಿ ಮೇೂದಿಯವರಿಗೆ ಸ್ಪರ್ಧಿಸುವ ಪ್ರಾಯದ ಆಹ೯ತೆ ಇದೆ ಯಾಕೆಂದರೆ ಆಗ ಅವರಿಗೆ 74 ತುಂಬಿರುತ್ತದೆ. ಆದ್ರೆ ಮೇೂದಿಯವರಿಗೂ ಮತ್ತು ಬಿಜೆಪಿಯ ಒಳಗೂ ಹೊರಗೂ ಇರುವ ದೊಡ್ಡ ಪ್ರಶ್ನೆ ಅಂದರೆ 2024 ರ ಚುನಾವಣೆಯಲ್ಲಿ ಬಿಜೆಪಿ ಅರ್ಥಾತ್ ಮೇೂದಿ ಗೆದ್ದರೆ ಅವರು ಕೇವಲ ಒಂದು ವರುಷಕ್ಕೆ ಮಾತ್ರ ಪ್ರಧಾನಿಯಾಗಿ ಮುಂದುವರಿಯಬೇಕೇ? ಕನಾ೯ಟಕದಲ್ಲಿ ಯಡಿಯೂರಪ್ಪನವರಿಗೆ ಹೇಳಿದ ತರಹ? ಇದು ಮುಂದೆ ಸಾಕಷ್ಟು ಚಚೆ೯ಗೂ ಬರಬಹುದಾದ ಪ್ರಶ್ನೆ. ವಿರೇೂಧಿಗಳಂತೂ ಇದನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಳ್ಳುವುದಂತೂ ಗ್ಯಾರಂಟಿ. ಆದರೆ ಮೇೂದಿಯವರಿಗಂತೂ ಅಧಿಕಾರದಲ್ಲಿ ಮುಂದುವರಿಯಬೇಕೆಂಬ ಜಾಯಮಾನದವರಲ್ಲ. ಆದರೆ ಪಕ್ಷ ಗೆದ್ದು ಬರಬೇಕಾದರೆ ಮೇೂದಿಯವರ ಹೆಸರು ಬೇಕೇ ಬೇಕು ಅನ್ನುವ ಪರಿಸ್ಥಿತಿ. ಮೇೂದಿ ಹೆಸರಿನಲ್ಲಿಯೇ ಗೆದ್ದು ಬಂದವರು ಮೋದಿಯವರು ಬೇಡ ಅನ್ನುವ ನೈತಿಕೆ ಎಲ್ಲಿದೆ?
ಮೇೂದಿವರಿಗೆ 2025ಕ್ಕೆ 75 ತುಂಬಿದರೂ ಕೂಡಾ ಜನರು ಅವರನ್ನು ಬೇಡ ಅನ್ನುವ ಮನ:ಸ್ಥಿತಿಯಲ್ಲಿ ಖಂಡಿತವಾಗಿಯೂ ಇಲ್ಲ. ಅವರ ಮನೇೂ ಸಾಮರ್ಥ್ಯ ದೇಹದ ತಾಖತ್ತು ಚೆನ್ನಾಗಿ ಇರುವಾಗ 2029ರ ವರೆಗೂ ಈ ದೇಶಕ್ಕೆ ಮೇೂದಿಯವರ ಅಗತ್ಯವಿದೆ ಅನ್ನುವುದನ್ಮು ಖಂಡಿತವಾಗಿಯೂ ಪ್ರತಿಪಾದಿಸುತ್ತಾರೆ. ಹಾಗಾಗಿ ಮೇೂದಿಯವರು 15 ವರುಷಗಳ ಕಾಲ ಈ ದೇಶದ ಪ್ರಧಾನಿಯಾಗುವುದು ಶತಸಿದ್ದ. ಅದರಲ್ಲಿ ಎರಡು ಮಾತಿಲ್ಲ.
ಬಿಜೆಪಿಗ್ಗಿಂತ ಮೇೂದಿಯವರು ಹೇಗೆ ಭಿನ್ನ? ಇದು ಕುತೂಹಲದ ಪ್ರಶ್ನೆ. ಮೋದಿ ಬಿಜೆಪಿ ಹೌದು ಆದರೆ ಬಿಜೆಪಿ ಮೇೂದಿ ಅಲ್ಲ!. ಇದು ಖಂಡಿತವಾಗಿಯೂ ಸತ್ಯ. ಈ ಸತ್ಯದ ಅರಿವು ಮತದಾರರಿಗೆ ಆಗಿದೆ. ಮಾತ್ರವಲ್ಲ ಪಕ್ಷದವರಿಗೂ ಗೊತ್ತಿದೆ ಹಾಗಾಗಿ ಮೇೂದಿ ಅನ್ನುವ "ಬ್ರ್ಯಾಂಡ್ ನೇಮ್" ಬಿಜೆಪಿ ಗೆಲುವಿನ ಪ್ರಧಾನ ಅಸ್ತ್ರ. ಬಿಜೆಪಿಯವರಿಗೆ ಹಿಂದುತ್ವದ ಅಸ್ತ್ರ ಚಲಾವಣೆಯಲ್ಲಿ ಮಾಸಿದ ತಕ್ಷಣವೇ ಬಳಸಲು ಇರುವ ಪ್ರಮುಖ ಅಸ್ತ್ರವೆಂದರೆ ಮೇೂದಿ ಎಂಬ ನಾಮಾಸ್ತ್ರ. ಮೇೂದಿಯವರ ಪ್ರಾಮಾಣಿಕತೆ, ಅವಿಶ್ರಾಂತ ದುಡಿಮೆ, ದೂರದಶಿ೯ತ್ವ ಚಾಣಾಕ್ಷತನ, ವರ್ಚಸ್ಸು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಸ್ನೇಹಿತನದ ವ್ಯವಹಾರದ ಗತ್ತುಗಾರಿಕೆ. ಅದಕ್ಕಿಂತ ಮುಖ್ಯವಾಗಿ ಅಪ್ಪಟ ರಾಷ್ಟ್ರಭಕ್ತ. ಇದರಿಂದಲೇ ಅವರಿಗೆ ಭಕ್ತಾದಿಗಳು ಜಾಸ್ತಿ.
ಇಂದು ಮೇಾದಿಯವರು ಎಷ್ಟು ಖ್ಯಾತರು ಅಂದರೆ ಗ್ರಾಮ ಮಟ್ಟದಿಂದ ಹಿಡಿದು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದವರಗೆ ಮೇೂದಿಯವರ ಹೆಸರನ್ನು ಪ್ರತಿದಿನವೂ ತಪಿಸುವವರೂ ಇದ್ದಾರೆ, ಶಪಿಸುವವರೂ ಇದ್ದಾರೆ!!ಹಾಗಾಗಿ ಮೇೂದಿ ಅನ್ನುವ ಹೆಸರು ಜಗದಗಲಕ್ಕೂ ಪಸರಿಸಿದೆ.
ಮೇೂದಿಯವರ ಭಕ್ತರಿಗೆ ಮೇೂದಿಯವರ ಮೇಲೆ ಒಂದಿಷ್ಟು ಬೇಸರವೂ ಇದೆ. ಅದಕ್ಕೆ ಮುಖ್ಯ ಕಾರಣ ಇವರ ಹೆಸರನ್ನು ಹೇಳಿಕೊಂಡು ಗೆದ್ದು ಬಂದು ನಾವುಗಳೇ ಜನ ನಾಯಕರು ಅಂದುಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿರುವವರನ್ನು ಇವರು ಸಹಿಸಿಕೊಂಡು ಬೆನ್ನು ತಟ್ಟುತ್ತಾರಲ್ಲ. ಇದು ಸ್ವಲ್ಪ ಮೇೂದಿಯವರ ಬಗ್ಗೆ ಬೇಸರ ತರುವ ಸಂಗತಿಯೂ ಹೌದು. ಹಾಗಂತ ಇಂತವರನ್ನು ಪೂತಿ೯ಯಾಗಿ ಹೊರಗಿಟ್ಟು ರಾಜಕೀಯ ಮಾಡುವುದು ಮೇೂದಿಯವರಿಗೂ ಕಷ್ಟ. ಇದು ಮೇೂದಿಯವರಿಗೂ ತಿಳಿದಿದೆ.
ರಾಷ್ಟ್ರ ರಕ್ಷಣಾ ಕಾಯ೯ದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆ ಅಂದರೆ- ಸಂವಿಧಾನದ ವಿಧಿ 370 ಮತ್ತು 35A ರದ್ದು, ಪೌರತ್ವ ಕಾಯಿದೆ, ಜಿಎಸ್ಟಿ, ಅನ್ನುವ ರಾಷ್ಟೀಯ ತೆರಿಗೆ ನೀತಿ; ರಾಮ ಮಂದಿರದಂತಹ ಸೂಕ್ಷ್ಮ ವಿಚಾರಗಳನ್ನು ನ್ಯಾಯಾಂಗದ ಪರಿಧಿಯಲ್ಲಿ ಬಗೆ ಹರಿಸಿದ್ದು ಭ್ರಷ್ಟಾಚಾರದ ತಡೆಗೆ ನೇೂಟ್ ಬ್ಯಾನ್ ಅಸ್ತ್ರ ಮುಂತಾದ ಪ್ರಮುಖ ದಿಟ್ಟ ಹೆಜ್ಜೆಗಳು ಅವರನ್ನು ಸಾಧನೆಯ ಉತ್ತುಂಗಕ್ಕೆ ಏರಿಸಿದ ಕ್ರಾಂತಿಕಾರಿ ನಿರ್ಣಯಗಳು.
ಆದರೂ ಮೇೂದಿಯವರು ಬಹುಮುಖ್ಯವಾದ ಸವಾಲುಗಳು ಇನ್ನೂ ಜೀವಂತವಾಗಿಯೇ ಇವೆ. ಕೊರೊನದ ನಡುವೇ ದೇಶದಲ್ಲಿ ಉದ್ಯೋಗ ಆಥಿ೯ಕ ಚೇತರಿಕೆ ಆಗಬೇಕಾಗಿದೆ. ಬೆಲೆ ಏರಿಕೆ ನಿಯಂತ್ರಣ ಮಾಡಬೇಕಾದ ಅತೀ ದೊಡ್ಡ ಸವಾಲಿದೆ. ದೇಶದ ಹೆಮ್ಮೆಯ ಪ್ರಧಾನಿ ಎಂದೇ ಖ್ಯಾತರಾದ ಮೇೂದಿಯವರು ಈ ಎಲ್ಲಾ ಸವಾಲು ಸಮಸ್ಯೆಗಳನ್ನು ಬಗೆ ಹರಿಸಲಿ ಅನ್ನುವುದು ನಮ್ಮೆಲ್ಲರ ಆಶಯಾವೂ ಹೌದು. ಮೇೂದಿಯವರ ಹುಟ್ಟು ಹಬ್ಬಕ್ಕೆ ನಾವೆಲ್ಲರೂ ಕೈಜೇೂಡಿಸಿ ನಮೇೂ... ಅನ್ನೇೂಣ.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment