ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪದವಿಪ್ರದಾನ

ಇಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪದವಿಪ್ರದಾನ

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 2020-2021 ನೇ ಶೈಕ್ಷಣಿಕ ಸಾಲಿನ ಪದವಿಪ್ರದಾನ ಸಮಾರಂಭವು ಸಪ್ಟೆಂಬರ್ 24 ರಂದು ಬೆಳಗ್ಗೆ 10 ಗಂಟೆಗೆ ನಿಟ್ಟೆಯ ಸಂಭ್ರಮ ಸಭಾಂಗಣದಲ್ಲಿ ನಡೆಯಲಿದೆ. ವಿ.ಟಿ.ಯು ಎಕೆಡೆಮಿಕ್ ಸೆನೇಟ್ ಮೆಂಬರ್ ಹಾಗೂ ಮೂಡಬಿದ್ರೆಯ ಮ್ಯಾಂಗಳೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಇಂಜಿನಿಯರಿಂಗ್‍ನ ಪ್ರಾಂಶುಪಾಲ ಡಾ. ಜಿ.ಎಲ್. ಈಶ್ವರ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ನಿಟ್ಟೆ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಎನ್ ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿರುವರು.


ಕೋವಿಡ್-19 ರ ಸಲುವಾಗಿ ಈ ಬಾರಿಯ ಪದವಿಪ್ರದಾನ ಸಮಾರಂಭದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಬಿ.ಇ, ಎಂ.ಟೆಕ್ ಹಾಗೂ ಎಂ.ಸಿ.ಎ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಪದವಿಪ್ರದಾನ ಮಾಡಲಾಗುವುದು. ಶೈಕ್ಷಣಿಕ ಸಾಧನೆಗೈದ 30 ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಗುರುತಿಸಲಾಗುವುದು. ಪ್ರತೀ ವರ್ಷದಂತೆ ಈ ಕಾರ್ಯಕ್ರಮವನ್ನು ಲೈವ್ ವೆಬ್‍ಕಾಸ್ಟ್ ಮಾಡುವ ಯೋಜನೆಯನ್ನು ಸಂಸ್ಥೆಯು ರೂಪಿಸಿದ್ದು, ಕಾರ್ಯಕ್ರಮದ ಲೈವ್ ವೀಕ್ಷಣೆಗಾಗಿ nmamit.nitte.edu.in ಲಿಂಕ್‍ನ್ನು ಉಪಯೋಗಿಸಬಹುದಾಗಿದೆ ಎಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post